ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸೋತಿದೆ ಆದರೆ ಸತ್ತಿಲ್ಲ, ಮತ್ತೆ ಗೆದ್ದೇ ಗೆಲ್ಲುತ್ತೇವೆ: ಯು.ಟಿ.ಖಾದರ್ ವಿಶ್ವಾಸ - ಮಾಜಿ ಸಚಿವ ಯು.ಟಿ.ಖಾದರ್

ಕಾಂಗ್ರೆಸ್ ಸೋತಿರಬಹುದು ಆದರೆ ಸಾಯಲಿಲ್ಲ, ಮತ್ತೆ  ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಚಿವ ಯು.ಟಿ.ಖಾದರ್  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯು.ಟಿ.ಖಾದರ್

By

Published : Nov 20, 2019, 2:31 PM IST

ಮಂಗಳೂರು:ಕಾಂಗ್ರೆಸ್ ಸೋತಿರಬಹುದು ಆದರೆ ಸಾಯಲಿಲ್ಲ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಬಾರಿ ದ.ಕ.ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ 8ರಲ್ಲಿ ಏಳು ಸ್ಥಾನ ಗೆದ್ದಿದ್ದೆವು. ಮನಪಾ, ಗ್ರಾಪಂ, ತಾಪಂ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಕಾಂಗ್ರೆಸ್ ಆಯ್ಕೆಯಾಗಿತ್ತು ಎಂದರು.

ಯು.ಟಿ.ಖಾದರ್

ಬಿಜೆಪಿ ಅಧಿಕಾರಕ್ಕೆ ಬಂದು ಮೂರುವರೆ ತಿಂಗಳಲ್ಲಿ ರಾಜ್ಯದ ಜನತೆಗೆ ಸಾಕಾಗಿದೆ. ಪ್ರವಾಹ ಪರಿಹಾರ ಇನ್ನೂ ಯಾರಿಗೂ ತಲುಪಿಲ್ಲ. ಖಜಾನೆಯಲ್ಲಿ ದುಡ್ಡಿಲ್ಲ ಎಂದು ಹೇಳುತ್ತಾರೆ. ಪ್ರಧಾನಿ ಒಂದು ಸಲವೂ ಕರ್ನಾಟಕಕ್ಕೆ ಬಂದಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕೆನ್ನುವುದು ರಾಜ್ಯ ಸರ್ಕಾರದಲ್ಲೂ ಚರ್ಚೆಯಾಗುತ್ತಿಲ್ಲ. ಕೇಂದ್ರದಲ್ಲಿಯೂ ಚರ್ಚೆ ನಡೆದಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಪಡೆಯಲು ಬ್ಯಾಂಕುಗಳು ಸತಾಯಿಸುತ್ತಿದೆ, ಆದರೆ ಸರ್ಕಾರ ಮಾತ್ರ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಇರುವಾಗ 7 ಕೆ.ಜಿ. ಅಕ್ಕಿ ಉಚಿತವಾಗಿ ನೀಡುತ್ತಿತ್ತು. ಆದರೆ ಈಗ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಗಿ ಕೊಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಕಡ್ಡಾಯವಾಗಿ ಗೋಧಿ ಕೊಡಲು ಆರಂಭಿಸಿದ್ದಾರೆ. ಅಗತ್ಯ ಇರುವುದನ್ನು ಬಿಟ್ಟು, ಬೇರೆ ವಸ್ತುಗಳನ್ನು ನೀಡಲಾಗುತ್ತಿದೆ. ಜನಸಾಮಾನ್ಯರಿಗೆ ಮುಂದೆ ಅರ್ಥ ಆಗಬಹುದು. ಮತ್ತೆ ಜಿಲ್ಲೆ, ರಾಜ್ಯದಲ್ಲಿ ಕಾಂಗ್ರೆಸ್ ಗೆ ಜನರು‌‌ ಆಶೀರ್ವಾದ ಮಾಡಿ ಗೆಲ್ಲಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಡಿಸೆಂಬರ್ 5ಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಡೆಸಿರುವ ಪ್ರಚಾರ ಹಾಗೂ ಕೆಲಸಗಳನ್ನು ಗಮನದಲ್ಲಿರಿಸಿದರೆ 15ಕ್ಕೆ 15ಸ್ಥಾನವೂ ಕಾಂಗ್ರೆಸ್ ಗೆಲ್ಲಬೇಕು. ಆದ್ದರಿಂದ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂಬ ಭರವಸೆಯಿದೆ. ಈ ದೇಶದ ಸರ್ವೋಚ್ಚ ಅನರ್ಹರೆಂದು 15 ಶಾಸಕರಿಗೆ ತೀರ್ಪು ನೀಡಿದ್ದರೂ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಈ ಹದಿನೈದು ಮಂದಿಯನ್ನು ಮತ್ತೆ ಆರಿಸುತ್ತಾರೆಯೋ ಅಥವಾ ಬಿಡುತ್ತಾರೆಯೋ ಎಂದು ಇಡೀ ದೇಶದ ಚಿತ್ತ ಕರ್ನಾಟಕದ ಮೇಲಿದೆ. ಆದ್ದರಿಂದ ರಾಜ್ಯದ ಜನತೆ ಅನರ್ಹ ಶಾಸಕರನ್ನು ಸೋಲಿಸಿ ಅವರಿಗೆ ತಕ್ಕ ಪಾಠ ಕಲಿಸಿ, ರಾಜ್ಯದ ಮತದಾರರ ಗೌರವವನ್ನು ಉಳಿಸಿಕೊಡಬೇಕು ಎಂದರು.

ABOUT THE AUTHOR

...view details