ಕರ್ನಾಟಕ

karnataka

ETV Bharat / state

ಗೋಲಿಬಾರ್ ಪ್ರಕರಣದ ತನಿಖೆ: ಮಂಗಳೂರಿಗೆ ಆಗಮಿಸಿದ ಸಿಐಡಿ ತಂಡ - CID team investigation

ಮಂಗಳೂರು ಹಿಂಸಾಚಾರದ ವೇಳೆ ಗೋಲಿಬಾರ್​ಗೆ ಬಲಿಯಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣದ ತನಿಖೆಗಾಗಿ ಸಿಐಡಿ ತಂಡ ಮಂಗಳೂರಿಗೆ ಆಗಮಿಸಿದೆ.

CID team came manglore for Golibar case investigation
ಗೋಲಿಬಾರ್ ಪ್ರಕರಣ ತನಿಖೆಗೆ ಸಿಐಡಿ ತಂಡ ಮಂಗಳೂರಿಗೆ

By

Published : Dec 27, 2019, 10:38 AM IST

ಮಂಗಳೂರು: ಮಂಗಳೂರು ಹಿಂಸಾಚಾರದ ವೇಳೆ ಗೋಲಿಬಾರ್​ಗೆ ಬಲಿಯಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣದ ತನಿಖೆಗಾಗಿ ಅಪರಾಧ ತನಿಖಾ ಇಲಾಖೆ (ಸಿಐಡಿ) ತಂಡ ಮಂಗಳೂರಿಗೆ ಆಗಮಿಸಿದೆ.

ಡಿಸೆಂಬರ್ 19 ರಂದು ಪೌರತ್ವ ಕಾಯಿದೆ (ತಿದ್ದುಪಡಿ) ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಪೊಲೀಸ್‌ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿದ್ದರು.
ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೊಪ್ಪಿಸಿದ್ದು, ಸದ್ಯ ಪೊಲೀಸ್‌ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿದೆ.

ಸಿಐಡಿ ಎಸ್​.ಪಿ ರಾಹುಲ್ ಕುಮಾರ್ ಅವರ ನೇತೃತ್ವದ ತಂಡ ನಗರಕ್ಕೆ ಆಗಮಿಸಿದ್ದು, ವಿಚಾರಣೆ ಆರಂಭಿಸಿದೆ. ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ನಾಳೆಯಿಂದ ಶುರುವಾಗಲಿದೆ.

ABOUT THE AUTHOR

...view details