ಕರ್ನಾಟಕ

karnataka

ETV Bharat / state

ಸುಳ್ಯ ಬಳಿ ಹಳ್ಳಕ್ಕೆ ಬಿದ್ದ ಕಾರು ಪತ್ತೆ.. ಇಬ್ಬರು ನಾಪತ್ತೆ, ಮುಂದುವರೆದ ಶೋಧ ಕಾರ್ಯಾಚರಣೆ

ಕಾಣಿಯೂರು ಸಮೀಪದ ಬೈತಡ್ಕದಲ್ಲಿ ಹಳ್ಳಕ್ಕೆ ಬಿದ್ದ ಕಾರು ಹೊರತೆಗೆದ ಜನ- ಅದರಲ್ಲಿದ್ದವರು ನಾಪತ್ತೆ-ಮುಂದುವರಿದ ಶೋಧ ಕಾರ್ಯಾಚರಣೆ

ಹಳ್ಳಕ್ಕೆ ಬಿದ್ದ ಕಾರು ಪತ್ತೆ
ಹಳ್ಳಕ್ಕೆ ಬಿದ್ದ ಕಾರು ಪತ್ತೆ

By

Published : Jul 10, 2022, 3:15 PM IST

Updated : Jul 10, 2022, 10:28 PM IST

ಸುಳ್ಯ (ದಕ್ಷಿಣ ಕನ್ನಡ): ಇಂದು ಬೈತಡ್ಕ ಮಸೀದಿ ಬಳಿ ಮಾರುತಿ 800 ಕಾರು ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದಿದ್ದು, ಅದನ್ನು ನದಿಯಿಂದ ಮೇಲೆತ್ತಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಘಟನೆಯನ್ನು ದೃಢಪಡಿಸಿಕೊಳ್ಳಲಾಗಿದೆ. ಬಳಿಕ ಸ್ಥಳೀಯ ಪೊಲೀಸರು, ಸಾರ್ವಜನಿಕರು, ಅಗ್ನಿಶಾಮಕ ದಳ ಹಾಗೂ ಸವಣೂರಿನ ನಾಲ್ವರು ಡ್ರೈವರ್‌ಗಳಿಂದ ಶೋಧ ಕಾರ್ಯ ನಡೆದಿದೆ.

ಮಧ್ಯಾಹ್ನ ಸುಮಾರು 12 ಗಂಟೆಗೆ ಕಾರನ್ನು ಪತ್ತೆ ಮಾಡಿ 12.30ಕ್ಕೆ ಹೊರ ತೆಗೆಯಲಾಗಿದೆ. ತನಿಖೆಯಲ್ಲಿ ಕಾರು ಧನುಷ್ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಕಾರಿನಲ್ಲಿ ಚಾಲಕ ಧನುಷ್ ಮತ್ತು ಸಹ ಪ್ರಯಾಣಿಕ ಧನುಷ್ (21) ಇದ್ದರು ಎಂದು ತಿಳಿದುಬಂದಿದೆ. ವಾಹನ ಚಲಾಯಿಸುತ್ತಿದ್ದ ಧನುಷ್ ಅವರ ಸೋದರ ಮಾವನ ಮನೆಯಿಂದ ನಿನ್ನೆ ರಾತ್ರಿ 8 ಗಂಟೆಗೆ ಹೊರಟಿದ್ದರು ಎನ್ನಲಾಗ್ತಿದೆ. ಕಾಣೆಯಾದವರು ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಹಳ್ಳಕ್ಕೆ ಬಿದ್ದ ಕಾರು ಪತ್ತೆ

ಇದನ್ನೂ ಓದಿ:ಅಪಾಯ ಮಟ್ಟ ತಲುಪಿದ ನೇತ್ರಾವತಿ: ಅದ್ಯಪಾಡಿಯಲ್ಲಿ 35 ಮನೆ, ಕೃಷಿಭೂಮಿ ಜಲಾವೃತ

ಯುವಕರು ಅವರ ಮನೆಯವರಿಗೆ ಫೋನ್ ಕರೆ ಮಾಡಿ ತಮ್ಮ ಕಾರು ಅಪಘಾತವಾಗಿದೆ, ತಮ್ಮ ಕಾರು ಹೋಗಿದೆ. ಬೆಳಗ್ಗೆ ಮನೆಗೆ ಬರುತ್ತೇವೆ ಎಂದು ತಿಳಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಯುವಕರು ಕರೆ ಮಾಡಿದ್ದ ಫೋನ್ ನಂಬರ್ ಟ್ರೇಸ್ ಮಾಡುತ್ತಿರುವ ಪೊಲೀಸರಿಗೆ ಈ ಇಬ್ಬರು ಎಲ್ಲೋ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಒಂದು ಮೂಲಗಳ ಪ್ರಕಾರ ಕಾಣಿಯೂರು ಭಾಗದಲ್ಲಿ ಇವರ ಮೊಬೈಲ್ ಟವರ್ ತೋರಿಸಲಾಗುತ್ತಿತ್ತು ಎನ್ನಲಾಗಿದೆ.

Last Updated : Jul 10, 2022, 10:28 PM IST

ABOUT THE AUTHOR

...view details