ಉಳ್ಳಾಲ: ಹಾಡುಹಗಲೇ ಕಣ್ಣಿಗೆ ಮೆಣಸಿನ ಪುಡಿ ಎರಚಿ ರೋಲ್ಡ್ ಗೋಲ್ಡ್ ಸರ ಎಗರಿಸಿರುವ ಘಟನೆ ತಾಲೂಕಿನ ಹರೇಕಳ ಗ್ರಾಮದಲ್ಲಿ ನಡೆದಿದೆ.
ಕಣ್ಣಿಗೆ ಮೆಣಸಿನ ಪುಡಿ ಎರಚಿ ಮಹಿಳೆಯ ಸರಗಳವು! - Harekala's village in Ullal Taluk
ಬೈಕ್ನಲ್ಲಿ ಬಂದ ಸರಗಳ್ಳರು ಮಹಿಳೆಯ ರೋಲ್ಡ್ ಗೋಲ್ಡ್ ಸರ ಎಗರಿಸಿ ಪರಾರಿಯಾಗಿರುವ ಘಟನೆ ಉಳ್ಳಾಲ ತಾಲೂಕಿನಲ್ಲಿ ನಡೆದಿದೆ.
ರೋಲ್ಡ್ ಗೋಲ್ಡ್ ಸರ ಕಳವು
ಗ್ರಾಮದ ಬಾವಲಿಗುರಿ ಬಳಿ ಕೆಲಸಕ್ಕೆ ತೆರಳಲು ಬಸ್ಗಾಗಿ ಶಾಂತಾ ಎಂಬುವವರು ಕಾಯುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ನಡೆಸಿ ಪರಾರಿಯಾಗಿದ್ದಾರೆ.
ಮಹಿಳೆ ಧರಿಸಿದ ಕರಿಮಣಿ ರೋಲ್ಡ್ ಗೋಲ್ಡ್ ಆಗಿದ್ದು ಕಳ್ಳರಿಗೆ ಹಿಡಿಶಾಪ ಹಾಕುತ್ತಾ ಕೊಣಾಜೆ ಠಾಣೆಗೆ ಬಂದು ಕೇಸು ದಾಖಲಿಸಿದ್ದಾರೆ.