ಮಂಗಳೂರು: ಕರ್ನಾಟಕ ಶಿಕ್ಷಣ ಕಾಯಿದೆಯನ್ವಯ ನೋಂದಣಿ ಮಾಡಿರುವ ಶಾಲೆಗಳಲ್ಲಿ ಧರ್ಮಗಳ ಬೋಧನೆಗೆ ಅವಕಾಶವಿಲ್ಲ. ಧರ್ಮದ ಆಚರಣೆಗಳ ಬೋಧನೆಗಳನ್ನು ಶಾಲೆಯಲ್ಲಿ ಹೇಳಿಕೊಡಲು ಅವಕಾಶವಿಲ್ಲ. ಅವುಗಳ ಬಗ್ಗೆ ಶಾಲೆಯಲ್ಲಿ ಬೋಧಿಸುವಂತಿಲ್ಲ. ಬೈಬಲ್ ಹಾಗೂ ಖುರಾನ್ ಧರ್ಮ ಗ್ರಂಥಗಳಾಗಿದ್ದು, ಭಗವದ್ಗೀತೆ ಧರ್ಮ ಗ್ರಂಥವಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೈಸ್ತರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ಕಳುಹಿಸುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಭಗವದ್ಗೀತೆಯಲ್ಲಿ ಯಾವುದೇ ರೀತಿಯಲ್ಲಿ ಧರ್ಮದ ಆಚರಣೆಯ ಬಗ್ಗೆ ಬೋಧನೆ ಇಲ್ಲ. ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಮಾತ್ರ ಹೇಳಲಾಗುತ್ತದೆ. ಕ್ರಿಶ್ಚಿಯನ್ ಆಗಬೇಕಾದರೆ ಬೈಬಲ್ ಓದಬೇಕು ಎಂದು ಹೇಳಲಾಗುತ್ತದೆ. ಭಗವದ್ಗೀತೆಯಲ್ಲಿ ಹಿಂದೂ ದೇವರ ಬಗ್ಗೆ ಎಲ್ಲೂ ಮಾತನಾಡಿಲ್ಲ. ಆದ್ದರಿಂದ ಭಗವದ್ಗೀತೆಯನ್ನು ಯಾವುದೇ ಧರ್ಮಗ್ರಂಥ ಗಳೊಂದಿಗೆ ಹೋಲಿಕೆ ಮಾಡೋದು ತಪ್ಪಾಗುತ್ತದೆ ಎಂದು ಹೇಳಿದರು.