ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ನೆರವು..ಕೈ ಜೋಡಿಸಿದ ದ.ಕ ಜಿಲ್ಲೆಯ ಜನತೆ

ನೆರೆ ಸಂತ್ರಸ್ತರ ನೆರವಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಮುಂದೆ ಬಂದಿದ್ದು, ದಿನ ಬಳಕೆ ಹಾಗೂ ಅಗತ್ಯ ಸಾಮಾಗ್ರಿಗಳನ್ನು ಜಿಲ್ಲಾಡಳಿತಕ್ಕೆ ನೀಡುತ್ತಿದ್ದಾರೆ.

Assistance to neighboring people

By

Published : Aug 12, 2019, 4:40 AM IST

ಮಂಗಳೂರು:ನೆರೆ ಸಂತ್ರಸ್ತರ ನೆರವಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಮುಂದೆ ಬಂದಿದ್ದು, ದಿನ ಬಳಕೆ ಹಾಗೂ ಅಗತ್ಯ ಸಾಮಾಗ್ರಿಗಳನ್ನು ಜಿಲ್ಲಾಡಳಿತಕ್ಕೆ ನೀಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಉಂಟಾಗಿದ್ದ ಪ್ರವಾಹದಿಂದ ಕೆಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಮನೆ ವಸ್ತುಗಳನ್ನು ಕಳೆದುಕೊಂಡು ದಿಕ್ಕೇ ತೋಚದಂತಾಗಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ನೆರೆ ಸಂತ್ರಸ್ತರಿಗೆ ಅಗತ್ಯ ಸಾಮಾಗ್ರಿಗಳ ಸಂಗ್ರಹಣಾ ಕೊಠಡಿಯನ್ನು ಮಂಗಳೂರಿನ ಕೆಪಿಟಿ ವಿದ್ಯಾಲಯದಲ್ಲಿ ಮಾಡಿದೆ.

ನೆರೆ ಸಂತ್ರಸ್ತರಿಗೆ ನೆರವು

ನಿನ್ನೆ ಆರಂಭಿಸಲಾದ ಈ ಸಂಗ್ರಹಣಾ ಕೊಠಡಿಗೆ ನೆರವು ಭರಪೂರ ಹರಿದುಬರುತ್ತಿದೆ. ಧವಸ ಧಾನ್ಯ, ತರಕಾರಿ, ರಗ್ಗು, ಬಟ್ಟೆ, ಚಾಪೆ, ಬಕೆಟ್, ಗ್ಯಾಸ್ ಸ್ಟವ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ.

ABOUT THE AUTHOR

...view details