ಮಂಗಳೂರು: ಸೈಬರ್ ಅಪರಾಧ ಪ್ರಕರಣ (Cybercrime cases)ಗಳು ದಿನೇದಿನೆ ಹೆಚ್ಚುತ್ತಿವೆ. ವಿವಿಧ ರೀತಿಯಲ್ಲಿ ಜನರನ್ನು ಮರುಳು ಮಾಡಿ ವಂಚನೆಗೈಯಲು ತಂತ್ರ ಹೂಡಲಾಗುತ್ತಿದೆ.
ಎಷ್ಟೇ ಎಚ್ಚರಿಕೆಯಿಂದಿದ್ದರೂ ಈ ಜಾಲವು ಸಕ್ರಿಯವಾಗಿ ತನ್ನ ಮೋಸದ ಬಲೆಯನ್ನು ಬೀಸಿ ಜನಸಾಮಾನ್ಯರಿಗೆ ಅರ್ಥವಾಗದಂತೆ ಕಾನೂನಿನ ಚೌಕಟ್ಟಿನೊಳಗೆ ಬಾರದ ರೀತಿ ಅಪರಾಧ ಎಸಗುತ್ತಿದೆ.
ಸೈಬರ್ ಭದ್ರತಾ ತಜ್ಞ ಅನಂತ ಪ್ರಭು ಜಿ ಸಲಹೆಗಳನ್ನ ನೀಡಿರುವುದು.. ಈ ಬಗ್ಗೆ ಸೈಬರ್ ಭದ್ರತಾ ತಜ್ಞ ಅನಂತ ಪ್ರಭು ಜಿ. (Cyber security expert Ananta Prabhu G ) ಅವರು ಮಾತನಾಡಿದ್ದು, ನಾವೆಲ್ಲಾ ಗಮನಿಸುವಂತೆ ಲಾಕ್ಡೌನ್ ಸಂದರ್ಭದಲ್ಲಿ ಸಾಕಷ್ಟು ನಕಲಿ ಫೇಸ್ಬುಕ್ ಅಕೌಂಟ್ಗಳು ಸೃಷ್ಟಿಯಾಗಿವೆ. ಅದರಲ್ಲೂ ಪೊಲೀಸ್ ಅಧಿಕಾರಿಗಳ, ಸೈನ್ಯಾಧಿಕಾರಿಗಳ ಫೋಟೋವನ್ನು ಪ್ರೊಫೈಲ್ಗೆ ಬಳಸಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದರು. ಇದರಿಂದ ಜನ ಹೆಚ್ಚಾಗಿ ಯೋಚಿಸದೆ ಅಕ್ಸೆಪ್ಟ್ ಮಾಡುತ್ತಿದ್ದರು.
ಸೈಬರ್ ಭದ್ರತಾ ತಜ್ಞ ಅನಂತ ಪ್ರಭು ಜಿ ಸಲಹೆಗಳನ್ನ ನೀಡಿರುವುದು.. ನಂತರ ಅವರು ಸ್ವಲ್ವ ಹಣದ ಅವಶ್ಯಕತೆ ಇದೆ. ದಯಮಾಡಿ ಕಳುಹಿಸಿ ಎಂದು ಮನವಿ ಮಾಡಿ, ಜನರಿಗೆ ಮೋಸ ಮಾಡುತ್ತಿದ್ದರು. ಇತ್ತೀಚಿಗೆ ಸೈಬರ್ ಕ್ರೈಂ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿರುವ ಫಲವಾಗಿ ಇಂತಹ ಪ್ರಕರಣದ ಸಂಖ್ಯೆ ಕಡಿಮೆಯಾಗಿದೆ ಎಂದಿದ್ದಾರೆ.
ಸೈಬರ್ ಜಾಲದ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡುವವರನ್ನೂ ಒಮ್ಮೊಮ್ಮೆ ಮುಗ್ಗರಿಸಿ ಬೀಳುವಂತೆ ಮಾಡುತ್ತಾರೆ ಎಂದಿರುವ ಅವರು, ಇದರಿಂದ ಜನಸಾಮಾನ್ಯರ ಪಾಡೇನು?. ಸೈಬರ್ ಅಪರಾಧದ ಬಗ್ಗೆ ಜನರಿಗೆ ತಿಳುವಳಿಯಾದರೂ ಎಷ್ಟಿದೆ?. ಜೊತೆಗೆ ಸೈಬರ್ ಅಪರಾಧವನ್ನು ನಿಗ್ರಹಿಸುವಲ್ಲಿ ಕಾನೂನಿನಲ್ಲಿ ಸಫಲತೆ ದೊರಕೀತೆ? ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.
ಓದಿ:ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮೀಲಾದ್ರೂ ಬಿಡಲ್ಲ, ಬಲಿ ಹಾಕ್ತೀವಿ: ಸಿಎಂ ಬೊಮ್ಮಾಯಿ