ಮಂಗಳೂರು:ಸಚಿವ ಯು ಟಿ ಖಾದರ್ ಅವರು ವಿಪಕ್ಷ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಂಗಳೂರು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಸಚಿವ ಯು ಟಿ ಖಾದರ್‌ಗೆ ವಿಪಕ್ಷ ಶಾಸಕರ ಮೇಲೆ ನಂಬಿಕೆ ಇಲ್ಲ: ಬಿಜೆಪಿ ಶಾಸಕ ವೇದವ್ಯಾಸ ಕಾಮತ್
ಸಚಿವ ಯು ಟಿ ಖಾದರ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ಅವರು ನಿನ್ನೆ ತುಂಬೆ ಡ್ಯಾಂ ನೀರು ಪರಿಶೀಲನೆ ಮಾಡಲು ಹೋಗಿರುವುದು ಶಾಸಕರಾಗಿ ನಮಗೆ ಗೊತ್ತಿಲ್ಲ. ನಮ್ಮನ್ಮೆಲ್ಲ ಒಟ್ಟಾಗಿ ಕರೆದುಕೊಂಡು ಹೋಗಬೇಕಾದದ್ದು ಅವರ ಕರ್ತವ್ಯ. ಅವರು ಅಲ್ಲಿಗೆ ಹೋದ ಬಳಿಕ ಶಾಸಕರಲ್ಲಿ ಚರ್ಚಿಸಿ ಮಂಗಳೂರು ನಗರಕ್ಕೆ ಕುಡಿಯುವ ನೀರು ರೇಶನಿಂಗ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸಚಿವರಿಗೆ ವಿಪಕ್ಷ ಶಾಸಕರ ಮೇಲೆ ವಿಶ್ವಾಸವಿಲ್ಲದೆ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯರ ಅವಧಿ ಮುಗಿದಿರುವುದರಿಂದ ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ನೀರು ವಿಚಾರದಲ್ಲಿ ಸಾರ್ವಜನಿಕರಿಗೆ ದೂರು ನೀಡಿದರೆ ನಮ್ಮ ಶಾಸಕರು ಸೋತಿದ್ದಾರೆ. ವೇದವ್ಯಾಸ ಕಾಮತ್‌ಗೆ ಪೋನ್ ಮಾಡಿ ಎಂದು ಹೇಳುತ್ತಿದ್ದಾರೆ. ನೀರಿನ ಸಮಸ್ಯೆ ವಿಚಾರದಲ್ಲಿ ಇಂಜಿನಿಯರ್‌ಗಳ ಜೊತೆಗೆ ಮಾತಾಡಲು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ಏನು ಸಮಸ್ಯೆ? ಕಾಂಗ್ರೆಸ್‌ಗೆ ಅಧಿಕಾರ ಮಾತ್ರ ಮುಖ್ಯವೇ ಎಂದು ಪ್ರಶ್ನಿಸಿದರು.