ಕರ್ನಾಟಕ

karnataka

ETV Bharat / state

ಬಿಜೆಪಿಯ ಎಲ್ಲಾ ಕಾರ್ಯಕರ್ತರು ದೇಶ ಪ್ರೇಮಿಗಳೇ ಹೊರತು ದೇಶ ವಿರೋಧಿಗಳಲ್ಲ: ನಳಿನ್ ಕುಮಾರ್ ಕಟೀಲ್​​

ಬಿಜೆಪಿಯಿಂದ ವಿಧಾನ ಪರಿಷತ್ತಿಗೆ ​​ನೂತನವಾಗಿ ಆಯ್ಕೆಯಾದ ಪ್ರತಾಪ್ ಸಿಂಹ ನಾಯಕ್​ ಹಾಗೂ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ನೇಮಕವಾದ ಹರಿಕೃಷ್ಣ ಬಂಟ್ವಾಳ ಅವರನ್ನು ಅಭಿನಂದಿಸಲಾಯಿತು. ಸನ್ಮಾನ ಕಾರ್ಯಕ್ರಮದ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಮಾತನಾಡಿದರು.

BJP
ಬಿಜೆಪಿ

By

Published : Jun 27, 2020, 10:59 PM IST

ಬೆಳ್ತಂಗಡಿ (ದ.ಕ): ರಾಷ್ಟ್ರಿಯ ಸ್ವಯಂ ಸೇವಾ ಸಂಘವು ರಾಷ್ಟ್ರ ಪ್ರೇಮ ಕಲಿಸಿದರೆ, ಬಿಜೆಪಿ ವ್ಯಕ್ತಿ ನಿರ್ಮಾಣ ಬೋಧನೆ ಮಾಡುತ್ತಿದೆ. ಹೀಗಾಗಿ, ಆರ್​​​ಎಸ್​ಎಸ್​​ ಮತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರು ದೇಶಪ್ರೇಮಿಗಳೇ ಹೊರತು ದೇಶ ವಿರೋಧಿಗಳಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಹೇಳಿದರು.

ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ವಿಧಾನ ಪರಿಷತ್ತಿನ ನೂತನ ಸದಸ್ಯ ಕೆ. ಪ್ರತಾಪ್‍ಸಿಂಹ ನಾಯಕ್ ಮತ್ತು ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಹರಿಕೃಷ್ಣ ಬಂಟ್ವಾಳ್‍ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯನ ವ್ಯಕ್ತಿತ್ವದಂತೆ ಇನ್ನೊಬ್ಬರನ್ನು ಪ್ರೀತಿಸುವುದು, ಕಾರ್ಯಕರ್ತರನ್ನು ಬೆಳೆಸುವುದು ಬಿಜೆಪಿಯ ಸಿದ್ಧಾಂತ. ಆದರೆ, ಕಾಂಗ್ರೆಸ್​ ಹಣದ ರಾಜಕಾರಣ ಮಾಡುತ್ತಾ ಇನ್ನೊಬ್ಬರ ಕಾಲೆಯುತ್ತಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯ ಅಭಿನಂದನಾ ಕಾರ್ಯಕ್ರಮ​​

ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆ ಪಕ್ಷಕ್ಕೆ ಅಂತಿಮ ಕಾಲ ಬಂದಿದೆ. ಪ್ರತಾಪ್‍ ಸಿಂಹ ಅವರಂತಹ ಸಾಮಾನ್ಯ ವ್ಯಕ್ತಿಯನ್ನು ಪಕ್ಷ ಗುರುತಿಸಿದ್ದು, ಬಿಜೆಪಿ ಕಾರ್ಯಕರ್ತರಿಗೆ ಕೊಟ್ಟ ಗೌರವವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರತಾಪ್‍ಸಿಂಹ ನಾಯಕ್, ಬಾಲ್ಯದಲ್ಲಿ ಉತ್ತಮ ಸಂಸ್ಕಾರ ಸಿಕ್ಕರೇ ದೇಶ ಪ್ರೇಮ ಆಗಲು ಸಾಧ್ಯ. ದೇಶ ಪ್ರೇಮ ಬೆಳೆಸುವ ಏಕೈಕ ಪಕ್ಷ ಬಿಜೆಪಿ. ಪಕ್ಷದಲ್ಲಿ ದೊಡ್ಡದಾದ ಯುವ ಸೈನ್ಯ ಬೆಳೆದು ನಿಲ್ಲುವಲ್ಲಿ ಆರ್​ಎಸ್​ಎಸ್​ನ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಯುವಕರಲ್ಲಿ ದುಡಿಯುವ ಸಂಸ್ಕೃತಿ ಬೆಳೆಸಿದರೇ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ. ದೇಶವನ್ನು ಮತ, ಅಧಿಕಾರ, ದುಡ್ಡಿಗಾಗಿ ಕಾಂಗ್ರೆಸ್​ ಶ್ರಮಿಸಿದರೇ ಬಿಜೆಪಿ ದೇಶಕ್ಕಾಗಿ ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಇಡೀ ವಿಶ್ವವೇ ಭಾರತದತ್ತ ಮುಖ ಮಾಡುತ್ತಿರುವುದು ಇದಕ್ಕೆ ಸಾಕ್ಷಿ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಸದಸ್ಯೆ ಧನಲಕ್ಷ್ಮಿ ಜನಾರ್ಧನ್, ಹಿರಿಯ ವಕೀಲರಾದ ನೇಮಿರಾಜ ಶೆಟ್ಟಿ, ಉಪಸ್ಥಿತರಿದ್ದರು. ಇದೆ ವೇಳೆ ಹಲವರು ಕಾಂಗ್ರೆಸ್​ನಿಂದ​ ಬಿಜೆಪಿ ಸೇರ್ಪಡೆಯಾದರು.

ABOUT THE AUTHOR

...view details