ಕರ್ನಾಟಕ

karnataka

ETV Bharat / state

ಏರ್ ಲಿಫ್ಟ್​ : ನಾಳೆ ಮಸ್ಕತ್​​ನಿಂದ ಮಂಗಳೂರಿಗೆ ಬರಲಿದ್ದಾರೆ 63 ಜನ - mangalore airport

ನಾಳೆ ಮಸ್ಕತ್​​ನಿಂದ 63 ಪ್ರಯಾಣಿಕರು ಬೆಂಗಳೂರು ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅವರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲು ದ.ಕ. ಜಿಲ್ಲಾಡಳಿತ ಸಿದ್ದತೆ ನಡೆಸಿದೆ.

ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ವಿ ಮಂಗಳೂರು ವಿಮಾನ ನಿಲ್ದಾಣಮಾನ ನಿಲ್ದಾಣ

By

Published : May 19, 2020, 11:59 PM IST

ಮಂಗಳೂರು:ಲಾಕ್​​ಡೌನ್ ಬಳಿಕ ಸಂಕಷ್ಟದಲ್ಲಿ ಸಿಲುಕಿರುವ ವಿದೇಶದಲ್ಲಿರುವ ಭಾರತೀಯರನ್ನು ಏರ್ ಲಿಫ್ಟ್​ ಮಾಡಲಾಗುತ್ತಿದೆ. ನಾಳೆ ಮಸ್ಕತ್​​​ನಿಂದ ಬೆಂಗಳೂರು ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನ ಬರಲಿದೆ.

ಮೇ 12 ಮತ್ತು ಮೇ 18 ರಂದು ದುಬೈನಿಂದ ವಿಮಾನ ಬಂದಿದ್ದು, ನಾಳೆ ಮಸ್ಕತ್​​ನಿಂದ ಬರಲಿದೆ. ನಾಳೆ ಮಸ್ಕತ್​​ನಿಂದ ಹೊರಡಲಿರುವ ವಿಮಾನ ಅಲ್ಲಿಂದ ಬೆಂಗಳೂರಿಗೆ ತಲುಪಲಿದೆ. ಬಳಿಕ ಬೆಂಗಳೂರಿನಿಂದ ಮಂಗಳೂರಿಗೆ ಬರಲಿದೆ.

ವಿಮಾನದಲ್ಲಿ ಇಬ್ಬರು ಮಕ್ಕಳು ಮತ್ತು 176 ವಯಸ್ಕರು ಪ್ರಯಾಣಿಸಲಿದ್ದಾರೆ. ಇದರಲ್ಲಿ ಬೆಂಗಳೂರಿನ ಇಬ್ಬರು ಮಕ್ಕಳು ಮತ್ತು 113 ವಯಸ್ಕರಿದ್ದು, ಅವರನ್ನು ಇಳಿಸಿದ ಬಳಿಕ, ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಮಂಗಳೂರಿಗೆ 63 ಪ್ರಯಾಣಿಕರು ಆಗಮಿಸಲಿದ್ದಾರೆ. ಮಂಗಳೂರಿಗೆ ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲು ದ.ಕ. ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ABOUT THE AUTHOR

...view details