ಕರ್ನಾಟಕ

karnataka

ETV Bharat / state

ದೈವಾರಾಧನೆ ಕುರಿತು ಅವಮಾನಿಸಿದ ಆರೋಪ: ವಿವಿಧ ಠಾಣೆಗಳಲ್ಲಿ ದೂರು ದಾಖಲು! - worship of dakshni kannada

ದೈವಗಳ ಫೊಟೋಗಳನ್ನು ಬಳಸಿ ಅಸಭ್ಯವಾಗಿ ಎಡಿಟ್ ಮಾಡುವುದು, ತಮ್ಮದೇ ಕಲ್ಪನೆಯಲ್ಲಿ ಚಿತ್ರವಿಚಿತ್ರ ಚಿತ್ರಗಳನ್ನು ಬಿಡಿಸುವುದು, ದೈವ ನರ್ತನಗಳ ವಿಡಿಯೋಗಳಿಗೆ ಸಿನಿಮಾ ಹಾಡುಗಳು, DJ ಹಾಡುಗಳನ್ನು ಹಾಕಿ ಎಡಿಟ್ ಮಾಡುವುದು, ವಿಚಿತ್ರ ಭಂಗಿಯಲ್ಲಿ ದೈವದ ಫೊಟೋ ತೆಗೆಯುವುದು, ಸಂಧಿ, ಪಾಡ್ದನ, ಬೀರಗಳಲ್ಲಿ ಇಲ್ಲದ ಕಥೆಕಟ್ಟಿ ಅದಕ್ಕೆ ತಕ್ಕುದಾದ ವಿಡಿಯೋಗಳನ್ನು ಮಾಡಿ ನಂಬಿಕೆಗೆ ನೋವುಂಟು ಮಾಡುವ ಕೃತ್ಯಗಳು ನಡೆಯುತ್ತಿವೆಂದು ಆರೋಪಿಸಲಾಗಿದೆ‌.

Accused as insulting a worship of dakshni kannada: complaint registered
ದೈವಾರಾಧನೆ ಕುರಿತು ಅವಮಾನಿಸಿದ ಆರೋಪ; ವಿವಿಧ ಠಾಟೆಗಳಲ್ಲಿ ದೂರು ದಾಖಲು!

By

Published : Jan 7, 2021, 9:56 AM IST

ಮಂಗಳೂರು: ತುಳುನಾಡಿನ ನಂಬಿಕೆ ಎಂದೇ ಪರಿಗಣಿಸಲ್ಪಟ್ಟಿರುವ ದೈವಾರಾಧನೆಯನ್ನು ಚಿತ್ರವಿಚಿತ್ರ ರೀತಿಯಲ್ಲಿ ಬಿಂಬಿಸಿ, ಎಡಿಟ್ ಮಾಡಿ ಅಸಂಖ್ಯಾತ ದೈವ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ನೋವು ಉಂಟು ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆ "ಯುವ ತುಳುನಾಡ್ ® ಕುಡ್ಲ" ಎಂಬ ಸಂಘಟನೆ ದೂರು ಸಲ್ಲಿಸಿದೆ.

ವಿವಿಧ ಠಾಟೆಗಳಲ್ಲಿ ದೂರು ದಾಖಲು!

ದೈವಗಳ ಫೊಟೋಗಳನ್ನು ಬಳಸಿ ಅಸಭ್ಯವಾಗಿ ಎಡಿಟ್ ಮಾಡುವುದು, ತಮ್ಮದೇ ಕಲ್ಪನೆಯಲ್ಲಿ ಚಿತ್ರವಿಚಿತ್ರ ಚಿತ್ರಗಳನ್ನು ಬಿಡಿಸುವುದು, ದೈವ ನರ್ತನಗಳ ವಿಡಿಯೋಗಳಿಗೆ ಸಿನಿಮಾ ಹಾಡುಗಳು, DJ ಹಾಡುಗಳನ್ನು ಹಾಕಿ ಎಡಿಟ್ ಮಾಡುವುದು, ವಿಚಿತ್ರ ಭಂಗಿಯಲ್ಲಿ ದೈವದ ಫೊಟೋ ತೆಗೆಯುವುದು, ಸಂಧಿ, ಪಾಡ್ದನ, ಬೀರಗಳಲ್ಲಿ ಇಲ್ಲದ ಕಥೆಕಟ್ಟಿ ಅದಕ್ಕೆ ತಕ್ಕುದಾದ ವಿಡಿಯೋಗಳನ್ನು ಮಾಡಿ ನಂಬಿಕೆಗೆ ನೋವುಂಟು ಮಾಡುವ ಕೃತ್ಯಗಳು ನಡೆಯುತ್ತಿವೆಂದು ಆರೋಪಿಸಲಾಗಿದೆ‌. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಸಾಮಾಜಿಕ ಜಾಲತಾಣಗಳ ಪೇಜ್, ಗ್ರೂಪ್, ಖಾತೆಗಳ ಮೇಲೆ ದೂರು ಸಲ್ಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ:ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಚಿರತೆ ಓಡಾಟ..ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಯುವ "ತುಳುನಾಡ್ ® ಕುಡ್ಲ" ಸಂಘಟನೆಯು ಮಂಗಳೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಸೈಬರ್ ಕ್ರೈಮ್ ಸ್ಟೇಷನ್ ಹಾಗೂ ಮಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಿದೆ.

ABOUT THE AUTHOR

...view details