ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಚಲಾಯಿಸುತ್ತಿದ್ದ ಕಾರು ನಗರದ ನಂತೂರು ಬಳಿ ಅಪಘಾತಕ್ಕೀಡಾಗಿದ್ದು, ಹಣೆಗೆ ಸಣ್ಣಪುಟ್ಟ ಗಾಯಗೊಂಡು ಪವಾಡಸದೃಶ್ಯ ರೀತಿಯಲ್ಲಿ ಅವರು ಪಾರಾಗಿದ್ದಾರೆ.
ಕಾರವಾರದಲ್ಲಿ ಇಂದು ತುಳು, ಬ್ಯಾರಿ, ಅರೆಭಾಷೆ, ಕೊಡವ ಮತ್ತಿತರ ಅಕಾಡೆಮಿಗಳ ಕಾರ್ಯಕ್ರಮವಿದ್ದು, ಟಿಟಿ ವಾಹನದ ಮೂಲಕ ಅಲ್ಲಿಗೆ ತೆರಳಲು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಶಕ್ತಿನಗರದಲ್ಲಿರುವ ತಮ್ಮ ಮನೆಯಿಂದ ತುಳು ಭವನಕ್ಕೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ.