ಕರ್ನಾಟಕ

karnataka

ETV Bharat / state

ಸರ್ಕಾರಿ ವೈದ್ಯೆಗೆ ನಿಂದಿಸಿ ವಿಡಿಯೋ ಹರಿಬಿಟ್ಟ ಆರೋಪ.. ಜಿಪಂ ಅಧ್ಯಕ್ಷೆ ವಿರುದ್ಧ ಮಾನಹಾನಿ ಕೇಸ್​​ - ಂಂಗಳೂರು

ಪುತ್ತೂರು ಕಸಬಾ ಗ್ರಾಮದ ಸರಕಾರಿ ಆಸ್ಪತ್ರೆ ವೈದ್ಯೆಯೊಬ್ಬರು ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಯಲ್ಲಿದ್ದಾಗ ಅಲ್ಲಿಗೆ ಬಂದ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ, ಇತ್ತೀಚೆಗೆ ಪೊಲೀಸ್ ದೌರ್ಜನ್ಯಕ್ಕೊಳಗಾದ ಬಾಲಕಿ ಬಗ್ಗೆ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ರೋಗಿಗಳ ತಪಾಸಣೆಯಲ್ಲಿದ್ದ ವೈದ್ಯೆ ಬರುವುದು ಸ್ವಲ್ಪ ವಿಳಂಬವಾಗಿದೆ. ಇದರಿಂದ ಸಿಟ್ಟಿಗೆದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ,  ಸಾರ್ವಜನಿಕರ ಎದುರೆ ವೈದ್ಯರಿಗೆ ನಿಂದಿಸಿದ್ದಾರೆ. ಇದರ ವಿರುದ್ಧ ಈಗ ದೂರು ದಾಖಲಾಗಿದೆ.

ಸರ್ಕಾರಿ ವೈದ್ಯೆಗೆ ನಿಂದನೆ : ಜಿ.ಪಂ ಅಧ್ಯಕ್ಷೆ ವಿದುದ್ಧ ಮಾನಹಾನಿ ಕೇಸ್​​

By

Published : Jul 2, 2019, 11:45 AM IST

Updated : Jul 2, 2019, 1:02 PM IST

ಮಂಗಳೂರು:ಸರ್ಕಾರಿವೈದ್ಯೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವೈದ್ಯೆ ದೂರು ದಾಖಲಿಸಿದ್ದಾರೆ.

ಪುತ್ತೂರು ಕಸಬಾ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯೆ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಯಲ್ಲಿದ್ದಾಗ ಆಗ ಅಲ್ಲಿಗೆ ಬಂದ ದಕ್ಷಿಣ ಕನ್ನಡ ಜಿಪಂ ಅಧ್ಯಕ್ಷೆ ಮೀನಾಕ್ಷಿ, ಇತ್ತೀಚೆಗೆ ಪೊಲೀಸ್ ದೌರ್ಜನ್ಯಕ್ಕೊಳಗಾದ ಬಾಲಕಿ ಬಗ್ಗೆ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ರೋಗಿಗಳ ತಪಾಸಣೆಯಲ್ಲಿದ್ದ ವೈದ್ಯೆ ಬರುವುದು ಸ್ವಲ್ಪ ವಿಳಂಬವಾಗಿದೆ. ಇದರಿಂದ ಸಿಟ್ಟಿಗೆದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ, ಸಾರ್ವಜನಿಕರೆದುರೆ ವೈದ್ಯರಿಗೆ ನಿಂದಿಸಿದ್ದಾರೆ.

ಸರ್ಕಾರಿ ವೈದ್ಯೆಗೆ ನಿಂದನೆ .. ಜಿಪಂ ಅಧ್ಯಕ್ಷೆ ವಿರುದ್ಧ ಮಾನಹಾನಿ ಕೇಸ್​​

ಅಷ್ಟೇ ಅಲ್ಲ, ತಮ್ಮ ಬೆಂಬಲಿಗರಿಂದ ವಿಡಿಯೋ ಚಿತ್ರೀಕರಣ ಮಾಡಿಸಿ, ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ರಿಂದ ತನ್ನ ಮಾನಹಾನಿಯಾಗಿದೆ ಎಂದು ವೈದ್ಯೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ಜಿಪಂ ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Last Updated : Jul 2, 2019, 1:02 PM IST

ABOUT THE AUTHOR

...view details