ಕರ್ನಾಟಕ

karnataka

ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವು..

ದುಬೈನಿಂದ ಭಾರತಕ್ಕೆ ಹಿಂತಿರುಗಿ, ವಿಮಾನ ನಿಲ್ದಾಣದಲ್ಲಿ ಎಮಿಗ್ರೇಶನ್ ವಿಭಾಗದಲ್ಲಿ ನಿರ್ಗಮನದ ಮೊಹರು ಹಾಕುವ ವೇಳೆ ಹೃದಯಾಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

Kn_Mng_03_
ಮೃತ ವ್ಯಕ್ತಿ

By

Published : Oct 4, 2022, 8:45 PM IST

ಮಂಗಳೂರು: ದುಬೈನಿಂದ ಹಿಂತಿರುಗಿದ್ದ ವ್ಯಕ್ತಿಯೊಬ್ಬರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಮಂಗಳೂರು ಹೊರವಲಯದ ಮುಕ್ಕ ನಿವಾಸಿ ಮುಹಮ್ಮದ್ (65) ಮೃತಪಟ್ಟವರು. ಮೃತ ಮುಹಮ್ಮದ್ ಅವರ ಪತ್ನಿ ದುಬೈನಲ್ಲಿರುವ ಮಗಳ ಬಳಿ ತೆರಳಿದ್ದರು. ಈ ಹಿನ್ನೆಲೆ ಅವರನ್ನು ಭೇಟಿಯಾಗಲು ಮುಹಮ್ಮದ್ ಅವರು ಗುರುವಾರ ದುಬೈಗೆ ತೆರಳಿ ರವಿವಾರ ಭಾರತಕ್ಕೆ ಹಿಂದಿರುಗಿದ್ದ ವೇಳೆ ಈ ಘಟನೆ ನಡೆದಿದೆ.

ಮಂಗಳೂರು ವಿಮಾನ‌ ನಿಲ್ದಾಣಕ್ಕೆ ದುಬೈನಿಂದ ಆಗಮಿಸಿದ್ದ ಅವರು ಎಮಿಗ್ರೇಶನ್ ವಿಭಾಗದಲ್ಲಿ ನಿರ್ಗಮನದ ಮೊಹರು ಹಾಕಲು ಅಧಿಕಾರಿಗಳಿಗೆ ಪಾಸ್ ಪೋರ್ಟ್ ನೀಡಿ ನಿಂತಿದ್ದ ವೇಳೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ. ತಕ್ಷಣ ವಿಮಾನ ನಿಲ್ದಾಣದ ಆ್ಯಂಬುಲೆನ್ಸ್ ಮೂಲಕ ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮುಹಮ್ಮದ್ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ:ರೈಲ್ವೆ ನಿಲ್ದಾಣದಲ್ಲಿ ಹಠಾತ್​ ಹೃದಯಾಘಾತ: ಪತಿಗೆ ಉಸಿರು ತುಂಬಿ ಜೀವ ಉಳಿಸಿದ ಪತ್ನಿ!

ABOUT THE AUTHOR

...view details