ಕಡಬ(ದ.ಕ) :ಅನಾಮಧೇಯ ವ್ಯಕ್ತಿಯೊಬ್ಬ ಬ್ಯಾಂಕ್ ಮ್ಯಾನೆಜರ್ ಹೆಸರಲ್ಲಿ ಕಡಬದ ಯುವಕನಿಗೆ ಕರೆ ಮಾಡಿ, ಬ್ಯಾಂಕ್ ಖಾತೆಗೆ ಸರ್ಕಾರದಿಂದ ನೀಡುವ ಹಣವನ್ನು ವರ್ಗಾಯಿಸಲು ಒಟಿಪಿ ಸಂಖ್ಯೆ ಕೊಡುವಂತೆ ಒತ್ತಾಯಿಸಿದ್ದಾನೆ.ಆದರೆ, ಯವಕ ಎಚ್ಚೆತ್ತುಕೊಂಡು ಬಚಾವ್ ಆಗಿದ್ದಾನೆ.
ಹಣ ಹಾಕ್ತೇವೆ ಒಟಿಪಿ ಕೊಡಿ ಅಂತಾ ಕೇಳಿದ್ರೆ ಎಚ್ಚರ... ನಿಮ್ಮ ಹಣ ಗುಳುಂ ಗ್ಯಾರೆಂಟಿ
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎರಡು ಸಾವಿರ ರೂ. ಖಾತೆಗೆ ಜಮೆ ಮಾಡಿದ್ದಾರೆ .ಅದನ್ನು ಪಡೆಯಬೇಕಾದರೆ ಮೊಬೈಲ್ ಸಂಖ್ಯೆಗೆ ಬಂದಿರುವ ಒಪಿಟಿ ನೀಡುವಂತೆ ಪಟ್ಟು ಹಿಡಿದಿದ್ದಾನೆ.ಆದರೆ, ಯವಕ ಎಚ್ಚೆತ್ತುಕೊಂಡು ಬಚಾವ್ ಆಗಿದ್ದಾನೆ.
ಕಡಬ ದಾಂಬ್ರೋಡಿಯ ಚೇತನ್ ನಾಯ್ಕ್ ಎಂಬುವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಅರೆ ಬರೆ ಕನ್ನಡದಲ್ಲಿ ಮಾತು ಮುಂದುವರಿಸಿ ವಿಜಯ ಬ್ಯಾಂಕ್ ಬೆಂಗಳೂರು ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎರಡು ಸಾವಿರ ರೂ. ಖಾತೆಗೆ ಜಮೆ ಮಾಡಿದ್ದಾರೆ .ಅದನ್ನು ಪಡೆಯಬೇಕಾದರೆ ಮೊಬೈಲ್ ಸಂಖ್ಯೆಗೆ ಬಂದಿರುವ ಒಪಿಟಿ ನೀಡುವಂತೆ ಪಟ್ಟು ಹಿಡಿದಿದ್ದಾನೆ.
ಆನ್ಲೈನ್ ನಲ್ಲಿ ವಂಚನೆ ಮಾಡುತ್ತಿರುವುದರ ಬಗ್ಗೆ ಮೊದಲೇ ಅರಿವಿದ್ದ ಚೇತನ್ , ಒಟಿಪಿ ನೀಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಅನಾಮಿಕ ವ್ಯಕ್ತಿ ಅಸಭ್ಯ ಪದಪ್ರಯೋಗ ಮಾಡಿ, ಬೈದು ಕರೆ ಕಡಿತಗೊಳಿಸಿದ್ದಾನೆ.