ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಪ ಸಮೀಪದ ಕೇನ್ಯ ಕಣ್ಕಲ್ ಎಂಬಲ್ಲಿ ಹೊಳೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ.
ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ (15) ಮತ್ತು ಅವಂತಿಕಾ (11) ಎಂಬ ಸಹೋದರಿಯರು ಮೃತಪಟ್ಟವರು ಎಂಬುದು ತಿಳಿದುಬಂದಿದೆ.
ಇವರು ಬೆಂಗಳೂರಿನಲ್ಲಿ ವಾಸವಿದ್ದೂ, ಊರಿನಲ್ಲಿ ನಡೆಯುವ ಕಾರ್ಯಕ್ರಮವೊಂದರ ನಿಮಿತ್ತ ಬಳ್ಪಕ್ಕೆ ಬಂದಿದ್ದರು ಎನ್ನಲಾಗಿದೆ. ಅಗ್ನಿಶಾಮಕ ದಳದಿಂದ ಹುಡುಕಾಟ ನಡೆಯುತ್ತಿದ್ದೂ, ಇಬ್ಬರ ಮೃತದೇಹಗಳೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಕಲಬುರಗಿ ಪ್ರವಾಸಕ್ಕೆ ಬಂದು ನೀರಿನಲ್ಲಿ ಮುಳುಗಿ ಬಾಲಕ ಸಾವು :ಪೋಷಕರು ಬೇಡ ಎಂದರೂ ಸ್ನೇಹಿತರೊಂದಿಗೆ ಬುದ್ಧವಿಹಾರ ನೋಡಲು ಬಂದಿದ್ದ ಬಾಲಕ ಕಲ್ಲು ಕ್ವಾರಿಯಲ್ಲಿ ನಿಂತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ (ಫೆಬ್ರವರಿ 22-2023)ರಂದು ನಗರದ ಶ್ರೀ ರಾಮತೀರ್ಥ ದೇವಸ್ಥಾನದ ಹಿಂಭಾಗ ನಡೆದಿತ್ತು. ಬೀದರ್ ನಗರದ ಅಂಬೇಡ್ಕರ್ ಬಡಾವಣೆ ನಿವಾಸಿ ಆಶೀಶ್ ಗುಪ್ತಾ (15) ಮೃತಪಟ್ಟಿರುವ ಹುಡುಗ ಎಂಬುದು ತಿಳಿದುಬಂದಿತ್ತು.
ಕಲಬುರಗಿಯಲ್ಲಿದ್ದ ಸ್ನೇಹಿತನ ಮನೆಗೆ ಭೇಟಿ ಕೊಟ್ಟು ಆರು ಜನ ಸೇರಿಕೊಂಡು ನಗರದ ಶ್ರೀರಾಮತೀರ್ಥ ದೇವರ ದರ್ಶನ ಮಾಡಿದ್ದರು. ಬಳಿಕ ಶೌಚಾಲಯಕ್ಕೆಂದು ದೇವಸ್ಥಾನದ ಹಿಂಭಾಗದ ಕಲ್ಲು ಕ್ವಾರಿ ಬಳಿ ಹೋಗಿದ್ದರು. ಶೌಚ ಮುಗಿಸಿಕೊಂಡು ನೀರು ತುಂಬಿದ್ದ ಕಲ್ಲಿನ ಕ್ವಾರಿಯಲ್ಲಿ ಈಜಾಡುವಾಗ ಆಶೀಶ್ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ. ಸ್ನೇಹಿತರು ಅಲ್ಲೇ ಬಟ್ಟೆ ಒಗೆಯುತ್ತಿದ್ದ ಮಹಿಳೆಯರಿಂದ ಸೀರೆ ಪಡೆದು ಆಶೀಶ್‌ನನ್ನು ರಕ್ಷಿಸಲು ಪ್ರಯತ್ನಪಟ್ಟರೂ ಫಲ ನೀಡಿರಲಿಲ್ಲ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ನೀರಿನಲ್ಲಿ ಮುಳುಗಿದ್ದ ಬಾಲಕನಿಗಾಗಿ ಹುಡುಕಾಟ ನಡೆಸಿದ್ದರು. ನಾಲ್ಕೈದು ಗಂಟೆಗಳ ಕಾಲ ಶೋಧಿಸಿ ಮೃತದೇಹ ಹೊರತೆಗೆದಿದ್ದರು. ಪೋಷಕರು ಬೇಡ ಎಂದು ಎಷ್ಟೇ ಹೇಳಿದರೂ ಕೇಳದೇ ಬಾಲಕ ತನ್ನ ಸ್ನೇಹಿತರ ಜೊತೆಗೂಡಿ ಇಲ್ಲಿಗೆ ಬಂದಿದ್ದನಂತೆ. ಬುದ್ಧ ವಿಹಾರ ವೀಕ್ಷಣೆ ಮಾಡುವ ಹಂಬಲದಿಂದ ಬಂದಿದ್ದು ನೋಡುವುದಕ್ಕೂ ಮುನ್ನವೇ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ:ಕಲಬುರಗಿಯಲ್ಲಿ ಸುರಿದ ಅಕಾಲಿಕ ಮಳೆಗೆ ತತ್ತರಿಸಿದ ಜನ, ಜಾನುವಾರು: ವೃದ್ಧ ಸಾವು
ತಾಯಿ ಸುಧಾಮಣಿ ಗುಪ್ತಾ ಮಾತನಾಡಿ, ಬೆಳಗ್ಗೆ ಆಶೀಶ್ ಸ್ನೇಹಿತರು ಮನೆ ಬಳಿ ಬಂದು ಬುದ್ಧ ವಿಹಾರ ನೋಡಲು ಹೊರಟಿರುವುದಾಗಿ ಹೇಳಿದ್ದಾರೆ. ನಾನು ನಿರಾಕರಿಸಿ ಶಾಲೆಗೆ ಹೋಗುವಂತೆ ಹೇಳಿದ್ದೆ. ಇಷ್ಟಾದರೂ ಕೇಳದೆ ಸ್ನೇಹಿತರೊಂದಿಗೆ ಹೋಗುವುದಾಗಿ ಪಟ್ಟು ಹಿಡಿದು ಹೋಗಿದ್ದ. ಬಳಿಕ 12 ಗಂಟೆ ಸುಮಾರಿಗೆ ನಡೆದಿರುವ ಘಟನೆ ಬಗ್ಗೆ ತಿಳಿದು ಬಂತು ಎಂದು ತಿಳಿಸಿದ್ದರು.
ಇದನ್ನೂ ಓದಿ:ಕಲಬುರಗಿ ಪ್ರವಾಸಕ್ಕೆ ಬಂದು ನೀರಿನಲ್ಲಿ ಮುಳುಗಿ ಬಾಲಕ ಸಾವು