ಕರ್ನಾಟಕ

karnataka

ETV Bharat / state

ಧರ್ಮಸ್ಥಳದಿಂದ ರಾಮ ಮಂದಿರ ನಿರ್ಮಾಣಕ್ಕೆ 25 ಲಕ್ಷ ರೂ. ದೇಣಿಗೆ: ಡಾ. ವೀರೇಂದ್ರ ಹೆಗ್ಗಡೆ

ಇದೇ 15 ರಿಂದ ಫೆ. 25ರವರೆಗೆ ನಿಧಿ ಸಮರ್ಪಣಾ ಅಭಿಯಾನ ಆಯೋಜಿಸಿದ್ದು, ಹತ್ತು ರೂ., ನೂರು ರೂ. ಹಾಗೂ 1000 ರೂ.ನ ಕೂಪನ್‍ಗಳ ಮೂಲಕ ಸಾರ್ವಜನಿಕರು ದೇಣಿಗೆ ನೀಡಬಹುದು. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸುವರು.

srirama-mandir-from-dharmasthala
ನಿಧಿ ಸಮರ್ಪಣಾ ಅಭಿಯಾನ

By

Published : Jan 13, 2021, 9:13 PM IST

Updated : Jan 14, 2021, 7:50 AM IST

ಬೆಳ್ತಂಗಡಿ: ಅನಂತ ಸದ್ಗುಣಗಳ ಆದರ್ಶ ವ್ಯಕ್ತಿಯೇ ಶ್ರೀರಾಮ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೂಲಕ ನಮ್ಮ ಇಂದಿನ ಪ್ರಜಾ ರಾಜ್ಯದಲ್ಲಿ ರಾಮ ರಾಜ್ಯದ ಕನಸು ನನಸಾಗಬೇಕು ಎಂದು ಉಡುಪಿ ಪೇಜಾವರದ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಿಧಿ ಸಮರ್ಪಣಾ ಅಭಿಯಾನ

ಓದಿ: ಸಚಿವ ಸ್ಥಾನ ಕಳೆದುಕೊಂಡ ನಾಗೇಶ್​ಗೆ ಗಿಫ್ಟ್​: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ ಸಿಎಂ!

ಬುಧವಾರ ಧರ್ಮಸ್ಥಳದಲ್ಲಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಸಮಿತಿಯ ನಿಧಿ ಸಮರ್ಪಣಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ತಾಯಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು. ಪ್ರತಿ ಮನೆಯಲ್ಲಿಯೂ ಮುಂಜಾನೆ ಮತ್ತು ಮುಸ್ಸಂಜೆ ಪ್ರತಿಯೊಬ್ಬರೂ ರಾಮನಾಮ ಸ್ಮರಣೆ ಮಾಡಬೇಕು. ತನ್ಮೂಲಕ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನವಾಗಿ ರಾಮ ರಾಜ್ಯ ರೂಪುಗೊಳ್ಳಬೇಕೆಂದು ಅವರು ಹಾರೈಸಿದರು.

ಇದೇ 15 ರಿಂದ ಫೆ. 25ರವರೆಗೆ ನಿಧಿ ಸಮರ್ಪಣಾ ಅಭಿಯಾನ ಆಯೋಜಿಸಿದ್ದು, ಹತ್ತು ರೂ., ನೂರು ರೂ. ಹಾಗೂ 1,000 ರೂ.ನ ಕೂಪನ್‍ಗಳ ಮೂಲಕ ಸಾರ್ವಜನಿಕರು ದೇಣಿಗೆ ನೀಡಬಹುದು. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸುವರು. ಅಯೋಧ್ಯೆಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಪ್ರವಾಸಿಗರಿಗೆ ವಸತಿ ಗ್ರಂಥಾಲಯ ಮೊದಲಾದ ಸೌಲಭ್ಯಗಳಿಗಾಗಿ 1,000 ಕೋಟಿ ರೂ. ವೆಚ್ಚದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ನಿಧಿ ಸಮರ್ಪಣೆಗೆ ಚಾಲನೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ವತಿಯಿಂದ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದರು. ಮುಂದೆ ಶ್ರೀ ಸ್ವಾಮಿಯ ಪ್ರೇರಣೆಯಂತೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸರ್ವರೂ ಸಕ್ರಿಯ ಸಹಕಾರ ನೀಡಿ ರಾಮ ಮಂದಿರವು ಶತಮಾನದ ವಿಸ್ಮಯವಾಗಿ ಅದ್ಭುತ ಮಂದಿರವಾಗಿ ಮೂಡಿ ಬರಬೇಕು. ಎಲ್ಲರ ಬೆಂಬಲದೊಂದಿಗೆ ಜನತಾ ರಾಮ ಮಂದಿರ ನಿರ್ಮಾಣವಾಗಲಿ ಎಂದು ಹಾರೈಸಿದರು.

Last Updated : Jan 14, 2021, 7:50 AM IST

ABOUT THE AUTHOR

...view details