ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಸೇರಿ ಮೂವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ದ.ಕ ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾಗೆ ಬಲಿ.. 186 ಸೋಂಕಿತರು ಪತ್ತೆ
ಇಂದು 29 ಮಂದಿ ಗುಣಮುಖರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2034 ಪ್ರಕರಣಗಳು ಈವರೆಗೆ ದೃಢಪಟ್ಟಿದ್ದು ಇದರಲ್ಲಿ 782 ಮಂದಿ ಗುಣಮುಖರಾಗಿದ್ದಾರೆ. 1211 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಮಂಗಳೂರಿನ 33 ವರ್ಷದ ಯುವಕ, 67 ವರ್ಷದ ಮಹಿಳೆ ಮತ್ತು 78 ವರ್ಷದ ವೃದ್ದ ಸಾವನ್ನಪ್ಪಿದವರು. 33 ವರ್ಷದ ಯುವಕನಿಗೆ ಲಿಂಪೋಬ್ಲಾಸ್ಟಿಕ್ ಲ್ಯುಕೇಮಿಯಾ, 67 ವರ್ಷದ ಮಹಿಳೆಗೆ ನ್ಯುಮೋನಿಯಾ, ಮಧುಮೇಹ, 78 ವರ್ಷದ ವೃದ್ದರಿಗೆ ಮಧುಮೇಹದ ಸಮಸ್ಯೆಯು ಇದ್ದು, ಇದರ ಜೊತೆಗೆ ಕೊರೊನಾ ಸೋಂಕು ಭಾಧಿಸಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 41 ಕ್ಕೆ ಏರಿಕೆಯಾಗಿದೆ. ಇಂದು 186 ಪ್ರಕರಣಗಳು ದೃಢಪಟ್ಟಿದೆ. ಇದರಲ್ಲಿ 37 ಪ್ರಾಥಮಿಕ ಸಂಪರ್ಕದಿಂದ, 64 ಐಎಲ್ಐ ಪ್ರಕರಣದಿಂದ, 17 ಸಾರಿ ಪ್ರಕರಣದಿಂದ, 2 ಬೆಂಗಳೂರಿನಿಂದ ಬಂದವರಿಂದ, 10 ವಿದೇಶದಿಂದ ಬಂದವರಿಂದ, 7 ಸರ್ಜರಿ ಪೂರ್ವದಲ್ಲಿ, 13 ರ‍್ಯಾಂಡಮ್ ಟೆಸ್ಟ್ನಿಂದ, 4 ಹೆರಿಗೆ ಪೂರ್ವ ಸ್ಯಾಂಪಲ್ ಟೆಸ್ಟ್ನಲ್ಲಿ ಪತ್ತೆಯಾಗಿದ್ದು, 32 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇಂದು 29 ಮಂದಿ ಗುಣಮುಖರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2034 ಪ್ರಕರಣಗಳು ಈವರೆಗೆ ದೃಢಪಟ್ಟಿದ್ದು ಇದರಲ್ಲಿ 782 ಮಂದಿ ಗುಣಮುಖರಾಗಿದ್ದಾರೆ. 1211 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.