ಕರ್ನಾಟಕ

karnataka

By

Published : Feb 4, 2021, 11:57 AM IST

ETV Bharat / state

ಇಂದು ಪಂಚಮಸಾಲಿ ಶ್ರೀಗಳನ್ನು ಭೇಟಿಯಾಗಲಿರುವ ಸಚಿವ ಸಿಸಿ ಪಾಟೀಲ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಪಂಚಮಸಾಲಿ ಪೀಠದ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿರುವ ಸ್ಥಳಕ್ಕೆ ಸಚಿವ ಸಿಸಿ ಪಾಟೀಲ ಅವರ ಜೊತೆಗೆ ಸಚಿವ ಮುರಗೇಶ್ ನಿರಾಣಿ ಕೂಡ ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

chitradurga
ಚಿತ್ರದುರ್ಗ

ಚಿತ್ರದುರ್ಗ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಪಂಚಮಸಾಲಿ ಪೀಠದ ಶ್ರೀಗಳ ನೇತೃತ್ವದ ಪಾದಯಾತ್ರೆಗೆ ಆಗ್ರಹಿಸಿ ಸ್ಥಳಕ್ಕೆ ಇಂದು ಸಚಿವ ಸಿಸಿ ಪಾಟೀಲ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ.

ನಗರದದ ಬುರುಜನರೊಪ್ಪ ಗ್ರಾಮದಿಂದ ಹಿರಿಯೂರಿನತ್ತ ಪಾದಯಾತ್ರೆಗೆ ತೆರಳಿದ್ದು, ಶ್ರೀಗಳ ಭೇಟಿಗೆ ಸಚಿವ ಸಿಸಿ ಪಾಟೀಲ ಅವರ ಜೊತೆಗೆ ಸಚಿವ ಮುರಗೇಶ್ ನಿರಾಣಿ ಕೂಡ ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಸರ್ಕಾರದ ನಿಯೋಗದಿಂದ ಬಿಜೆಪಿ ನಾಯಕ ಇಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಹಾಗೂ ಹರಿಹರದ ಪೀಠದ ವಚನಾನಂದ ಶ್ರೀಗಳ ಭೇಟಿಗೆ ಪಂಚಮಸಾಲಿ ಸಮುದಾಯದ ನಾಯಕರು ಹಾಗೂ ಬಿಜೆಪಿ ನಾಯಕರು ಇಂದು ಪಾದಯಾತ್ರೆ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ಮೀಸಲಾತಿ ಹೋರಾಟದ ಪಾದಯಾತ್ರೆ ನಿಲ್ಲಿಸುವಂತೆ ಮನವೊಲಿಸುವ ಯತ್ನದಲ್ಲಿದ್ದಾರೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಸಚಿವರುಗಳ ಜೊತೆಗೆ ಇತರ ಪಂಚಮಸಾಲಿ ಸಮುದಾಯದ ಮುಖಂಡರು ಬಂದು ಸಾಥ್ ನೀಡುತ್ತಾರೆ.

ಸಚಿವ ಸಿಸಿ ಪಾಟೀಲ ಪಂಚಮಸಾಲಿ ಪೀಠದ ಶ್ರೀಗಳನ್ನು ಭೇಟಿ ಮಾಡಲಿದ್ಧಾರೆ.

ಇನ್ನು ಪಾದಯಾತ್ರೆ ಕೈ ಬಿಡುವಂತೆ ಮನವೊಲಿಸಲು ಸಚಿವರು ಬರುತ್ತಿದ್ದಾರೋ ಅಥವಾ ಸಿಎಂ ಬಿಎಸ್‌ವೈ ಯಾವುದಾದರೂ ಸಂದೇಶ ಹೇಳಿ ಕಳುಹಿಸಿಕೊಡುತ್ತಿದ್ದಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಪಂಚಮಸಾಲಿ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ಮಧ್ಯಾಹ್ನದ ವೇಳೆಯಲ್ಲಿ ಹಿರಿಯೂರು ನಗರಕ್ಕೆ ತಲುಪಲಿದೆ. ಇಂದು ಸರ್ಕಾರದ ನಿಯೋಗದಿಂದ ಶ್ರೀಗಳ ಭೇಟಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಓದಿ:ಇಂದು ವಿಶ್ವ ಕ್ಯಾನ್ಸರ್‌ ಜಾಗೃತಿ ದಿನಾಚರಣೆ.. ರಾಜ್ಯದಲ್ಲಿ ಕಾಯಿಲೆಯ ಉಲ್ಬಣ ಹೇಗಿದೆ?

ಇತ್ತ ಐಮಂಗಲ ಗ್ರಾಮದ ಬಳಿ ಪಾದಯಾತ್ರೆ ಸ್ಥಳಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಮಾತುಕತೆಗೆ ವೇದಿಕೆ ಸಜ್ಜು ಮಾಡಲಾಗಿದ್ದು, ಸಚಿವ ಸಿ.ಸಿ.ಪಾಟೀಲ್ ನೇತೃತ್ವದ ನಿಯೋಗದಿಂದ 11 ಗಂಟೆಗೆ ಶ್ರೀಗಳ ಭೇಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪಾದಯಾತ್ರೆಗೆ ವಾಸ್ತವ್ಯ ಹೂಡಿದ ಗ್ರಾಮದ ಭಕ್ತರೊಬ್ಬರ ಮನೆಯಲ್ಲಿ ಪಂಚಮಸಾಲಿ ಶ್ರೀಗಳು ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದಾರೆ. ಇನ್ನು ಸಚಿವರ ಭೇಟಿಯಿಂದ ಸಿಎಂ ಯಾವ ಸಂದೇಶ ರವಾನಿಸಿದ್ದಾರೆ ಎಂಬುದು ತಿಳಿದು ಬರಲಿದೆ.

ABOUT THE AUTHOR

...view details