ಚಿತ್ರದುರ್ಗ: ನಗರದಲ್ಲಿರುವ ಐತಿಹಾಸಿಕ ಕೋಟೆ ವೀಕ್ಷಣೆಗೆ ಟಿಕೆಟ್ ಪಡೆಯುವ ವಿಚಾರದಲ್ಲಿ ಗೋಲ್ ಮಾಲ್ ನಡೆಯುತ್ತಿದೆ. ಭಾರತೀಯ ಪುರಾತತ್ವ ಇಲಾಖೆ ಸಿಬ್ಬಂದಿ ಈ ಗೋಲ್ ಮಾಲ್ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗ ಕೋಟೆ ವೀಕ್ಷಣೆ: ಟಿಕೆಟ್ ಇಲ್ಲದಿದ್ದರೂ ಹಣ ಪಡೆದು ಪ್ರವೇಶ!
ಪ್ರವಾಸಿಗರಿಗೆ ಆನ್ಲೈನ್ ಟಿಕೆಟ್ ಸಕಾಲಕ್ಕೆ ಲಭ್ಯವಾಗದೇ ಇರುವುದು ಹಾಗೂ ಆನ್ಲೈನ್ ಟಿಕೆಟ್ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಹಿನ್ನೆಲೆ ಹಣ ಪಡೆದು ಇಲ್ಲಿನ ಸಿಬ್ಬಂದಿ ಕೋಟೆಗೆ ಪ್ರವೇಶ ನೀಡುತ್ತಿದ್ದಾರೆ. ಪ್ರವಾಸಿಗರಿಂದ ಹಣ ಪಡೆದು ಸರ್ಕಾರಕ್ಕೆ ವಂಚಿಸುತ್ತಿರುವ ಸಿಬ್ಬಂದಿ ಹಣ ಕೇಳುವ ವೇಳೆ, ಕೆಲ ಪ್ರವಾಸಿಗರು ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆದಿದ್ದಾರೆ.
ಪ್ರವಾಸಿಗರಿಗೆ ಆನ್ಲೈನ್ ಟಿಕೆಟ್ ಸಕಾಲಕ್ಕೆ ಲಭ್ಯವಾಗದೇ ಇರುವುದು ಹಾಗೂ ಆನ್ಲೈನ್ ಟಿಕೆಟ್ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವ ಹಿನ್ನೆಲೆ ಹಣ ಪಡೆದು ಇಲ್ಲಿನ ಸಿಬ್ಬಂದಿ ಕೋಟೆಗೆ ಪ್ರವೇಶ ನೀಡುತ್ತಿದ್ದಾರೆ. ಪ್ರವಾಸಿಗರಿಂದ ಹಣ ಪಡೆದು ಸರ್ಕಾರಕ್ಕೆ ವಂಚಿಸುತ್ತಿರುವ ಸಿಬ್ಬಂದಿ ಹಣ ಕೇಳುವ ವೇಳೆ ಕೆಲ ಪ್ರವಾಸಿಗರು ತಮ್ಮ ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
7 ಸುತ್ತಿನ ಕೋಟೆಗೆ ನಿತ್ಯ ಸಾವಿರಾರು ಜನ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದು, ಎಲ್ಲರ ಬಳಿ ಹಣ ಪಡೆದು ಸರ್ಕಾರಕ್ಕೆ ವಂಚನೆ ಮಾಡಲಾಗುತ್ತಿದೆ. ಹೀಗೆ ಕೋಟೆ ದ್ವಾರದಲ್ಲಿ ವಸೂಲಿ ಮಾಡುತ್ತಿರುವ ಹಣ ಮಾತ್ರ ಸರ್ಕಾರದ ಬೊಕ್ಕಸಕ್ಕೆ ಸೇರುವ ಬದಲು ಸಿಬ್ಬಂದಿಯ ಜೇಬು ಸೇರುತ್ತಿದೆ ಎಂದು ಪ್ರವಾಸಿಗರು ಆರೋಪಿಸುತ್ತಿದ್ದಾರೆ.