ಚಿತ್ರದುರ್ಗ:ನಾವೆಲ್ಲರೂ ಮನುಷ್ಯರು, ನೋ ಬಂಡೆ, ನೋ ಹುಲಿ, ನನ್ನನ್ನು ಯಾರೋ ಒಬ್ಬರು ಹುಲಿಯಾ ಎಂದು ಕರೆದಿದ್ದರು. ನಾನು ಹುಲಿ ಅಲ್ಲ, ನಾನು ಮನುಷ್ಯ ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಯಾರೋ ಹುಲಿಯಾ ಎಂದು ಕರೆದರೆ ನಾನು ಹುಲಿ ಆಗಲ್ಲ; ಕಟೀಲ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು - Siddaramaiah Tweet
ಕಾಂಗ್ರೆಸ್ ಮುಖಂಡರು ಬಂಡೆ, ಹುಲಿ ಅಂತ ತಾವೇ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ. ಚುನಾವಣೆಯ ನಂತರ ಬಂಡೆಯೂ ಇಲ್ಲ, ಹುಲಿಯೂ ಇಲ್ಲ. ಕಾಂಗ್ರೆಸ್ ಪರಿಸ್ಥಿತಿ ದುಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದು ಟೀಕೆ ಮಾಡಿದ್ದ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ
ಹಿರಿಯೂರು ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಮುಖಂಡ ಶಹನವಾಜ್ ಹುಸೇನ್ ಅವರ ಪುತ್ರಿ ವಿವಾಹದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಹುಲಿ ಅಲ್ಲ, ಮನುಷ್ಯ. ಯಾರೋ ಹುಲಿಯಾ ಎಂದು ಕರೆದರೆ ನಾನು ಹುಲಿ ಆಗಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಮುಂದೆ ನಡೆದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯರವರೊಂದಿಗೆ ಮಾಜಿ ಸಚಿವ ಜಮೀರ್ ಅಹಮ್ಮದ್ ಕೂಡ ಇದ್ರು.
Last Updated : Nov 12, 2020, 8:21 PM IST