ಕರ್ನಾಟಕ

karnataka

ETV Bharat / state

ಭಾರತ ಏಕ ಧರ್ಮದ ದೇಶವಲ್ಲ... ಮಾಜಿ ಸಚಿವ ಹೆಚ್. ಆಂಜನೇಯ - H. Anjaneya talking aganist modi

ಮೋದಿ ಪ್ರಧಾನಿಯಾಗಿ ಒಂದು ಒಳ್ಳೆಯ ಕೆಲಸ‌ಮಾಡಲು ಆಗಲಿಲ್ಲ. ಬದಲಾಗಿ ಬಂಡವಾಳ ಶಾಹಿಗಳ ಪರ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಇನ್ನೂ ಮಾಧ್ಯಮಗಳನ್ನು ಹಾಗೂ ಸಾಮಾಜಿಕ ಜಾಲ ತಾಣಗಳನ್ನು ಮೋದಿ ಖರೀದಿಸಿದ್ದು, ಇಲ್ಲಿ ಅಧಿಕಾರ ಪ್ರಶ್ನಿಸಿದವರನ್ನು ಐಟಿ ಭಯ ಹುಟ್ಟಿಸುವ ಮೂಲಕ ಬಂಧಿಸುತಿದ್ದಾರೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

H. Anjaneya
ಹೆಚ್. ಆಂಜನೇಯ

By

Published : Dec 24, 2019, 8:35 PM IST

ಚಿತ್ರದುರ್ಗ: ಈ ದೇಶ ಏಕ ಧರ್ಮದ ದೇಶವಲ್ಲ ಬದಲಾಗಿ ಹಿಂದೂ, ಮುಸ್ಲಿಂ, ಪಾರ್ಸಿ, ಸಿಖ್ ಸೇರಿದಂತೆ ವಿವಿಧ ಧರ್ಮಗಳಿಂದ ಕೂಡಿದ ಸರ್ವಧರ್ಮಿಯರ ರಾಷ್ಟ್ರ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್. ಆಂಜನೇಯ

ಚಿತ್ರದುರ್ಗದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ‌ ನಡೆದ ಪ್ರತಿಭಟನೆಯಲ್ಲಿ ಪ್ರತಿಕ್ರಿಯಿಸಿದ ಅವರು ಆಳುವ ಸರ್ಕಾರ ಎಲ್ಲರನ್ನೂ ಒಂದೇ ಎಂಬ ಭಾವನೆಯಿಂದ ಕಾಣಬೇಕು. ಮೋದಿ ಪ್ರಧಾನಿಯಾಗಿ ಒಂದು ಒಳ್ಳೆಯ ಕೆಲಸ‌ಮಾಡಲು ಆಗಲಿಲ್ಲ. ಬದಲಾಗಿ ಬಂಡವಾಳ ಶಾಹಿಗಳ ಪರ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಇನ್ನೂ ಮಾಧ್ಯಮಗಳನ್ನು ಹಾಗೂ ಸಾಮಾಜಿಕ ಜಾಲ ತಾಣಗಳನ್ನು ಮೋದಿ ಖರೀದಿಸಿದ್ದು, ಇಲ್ಲಿ ಅಧಿಕಾರ ಪ್ರಶ್ನಿಸಿದವರನ್ನು ಐಟಿ ಭಯ ಹುಟ್ಟಿಸುವ ಮೂಲಕ ಬಂಧಿಸುತಿದ್ದಾರೆ. ಆದರೆ ನಾವು 70 ವರ್ಷ ಆಳ್ವಿಕೆ ‌ನಡೆಸಿದರೂ ಇಂತಹ ಏಕಪಕ್ಷೀಯ ಆಡಳಿತ ಎಂದು ಮಾಡಿಲ್ಲ ಎಂದು ಟೀಕಿಸಿದರು.

ABOUT THE AUTHOR

...view details