ಚಿತ್ರದುರ್ಗ:ರಾಜ್ಯದ ವಿವಿಧೆಡೆಗಳಿಂದ ಬಂದವರಿಗೆ ನಗರದ ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್ಗೆ ಸಿದ್ಧತೆ ನಡೆಸಿದಿರುವುದನ್ನು ಮನಗಂಡ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್ಗೆ ಸಿದ್ಧತೆ: ಸ್ಥಳೀಯರಿಂದ ಭಾರಿ ವಿರೋಧ
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ನಲ್ಲಿರುವ ಬಿಸಿಎಂ ಹಾಸ್ಟೆಲ್ನಲ್ಲಿ ಹೊರ ರಾಜ್ಯದಿಂದ ಬಂದವರಿಗಾಗಿ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗಿದ್ದು, ಕೊರೊನಾ ಹರಡುವ ಭೀತಿಯಿಂದ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ಗೇಟ್ ಬಳಿಯ ನಿವಾಸಿಗಳಿಂದ ಕ್ವಾರಂಟೈನ್ಗೆ ವಿರೋಧ ವ್ಯಕ್ತವಾಗಿದ್ದು, ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ನಲ್ಲಿರುವ ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡದೇ, ನಗರದ ಹೊರವಲಯದ ಕಟ್ಟಡಗಳಲ್ಲಿ ಈ ಸಿದ್ಧತೆ ಮಾಡಲು ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಬಿಸಿಎಂ ಹಾಸ್ಟೆಲ್ ನ ಡ್ರೈನೇಜ್ ನೀರು ರಸ್ತೆ ಮೇಲೆ ಹರಿಯುವ ಹಿನ್ನೆಲೆ, ಈ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಿದರೆ ಕೊರೊನ ಸೋಂಕು ಬಹು ಬೇಗ ಬಡಾವಣೆಯಲ್ಲಿ ಹರಡುವ ಭೀತಿಯಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲು ತಡರಾತ್ರಿ ಆಗಮಿಸಿದ ಪೊಲೀಸರು, ಅಧಿಕಾರಿಗಳ ಜತೆ ಸ್ಥಳೀಯರು ವಾಗ್ವಾದಕ್ಕಿಳಿದು ವಿರೋಧ ವ್ಯಕ್ತಪಡಿಸುವ ಮೂಲಕ ಕ್ವಾರಂಟೈನ್ ಸಿದ್ಧತೆಗಳನ್ನು ತಡೆದಿದ್ದಾರೆ.