ಚಿತ್ರದುರ್ಗ: ಮಾರುತಿ ಓಮಿನಿ ಹಾಗೂ ಬೊಲೆರೋ ವಾಹನದ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಓರ್ವ ಸಾವಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಕ್ಲಾರಹಳ್ಳಿ ಗೇಟ್ ಬಳಿ ಸಂಭವಿಸಿದೆ.
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾವು - Chitradurga news
ಓರ್ವ ಸಾವನ್ನಪ್ಪಿದರೆ ಮೂವರು ಗಾಯಗೊಂಡಿದ್ದಾರೆ. ಇವರೆಲ್ಲರೂ ದೀಪಾವಳಿ ಹಬ್ಬಕ್ಕೆ ಬಿಜೆ ಕೆರೆ ಗ್ರಾಮಕ್ಕೆ ಬರುತ್ತಿದ್ದರು ಎನ್ನಲಾಗಿದೆ.
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾವು
ಮೊಳಕಾಲ್ಮೂರು ತಾಲೂಕು ಚಿಕ್ಕೇರಹಳ್ಳಿ ಗ್ರಾಮದ ನಿವಾಸಿ ಅಶೋಕ್(35) ಮೃತನಾದವ. ಮೂರು ಜನರಿಗ ಗಾಯಗಳಾಗಿದ್ದು, ಚಳ್ಳಕೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ನಾಲ್ವರು ದೀಪಾವಳಿ ಹಬ್ಬಕ್ಕೆ ಬಿಜೆ ಕೆರೆ ಗ್ರಾಮಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.