ಚಿತ್ರದುರ್ಗ:ಜಿಲ್ಲೆಯಲ್ಲಿ ಎಲ್ಲರ ಸಹಕಾರದಿಂದ ಕೊರೊನಾ ನಿಯಂತ್ರಣದಲ್ಲಿದೆ. ಗಯಾನಾ ದೇಶದಿಂದ ಹಿಂದಿರುಗಿದ್ದ ಓರ್ವ ಮಹಿಳೆಗೆ ಮಾತ್ರ ಕೊರೊನಾ ಸೋಂಕು ಇರುವುದ ದೃಢವಾಗಿತ್ತು. ಆ ಮಹಿಳೆ ಈಗಾಗಲೇ ದಾವಣಗೆರೆ ಜಿಲ್ಲೆಯ ಆಸ್ಪತ್ರೆಗೆ ಶಿಫ್ಟ್ ಆಗಿದ್ದು, ನಮ್ಮಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ ಪಾಲಾಕ್ಷ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು , ಇನ್ನುಳಿದಂತೆ ಈವರೆಗೆ ಯಾರೊಬ್ಬರಲ್ಲೂ ಸೋಂಕು ಕಂಡು ಬಂದಿಲ್ಲ. ದೆಹಲಿಗೆ ತೆರಳಿದ್ದ ಇಬ್ಬರಲ್ಲೂ ಸಹ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಅವರ ರಕ್ತ ಮಾದರಿ, ಗಂಟಲು ದ್ರವದ ವರದಿಯಲ್ಲು ಕೂಡ ನೆಗೆಟಿವ್ ಬಂದಿದೆ. ಜಿಲ್ಲೆಯ ಜನ ಆತಂಕಕ್ಕೊಳಗಾಗಬಾರದು ಎಂದು ಧೈರ್ಯ ತುಂಬಿದರು.