ಚಿತ್ರದುರ್ಗ: ಲಾಕ್ಡೌನ್ನಿಂದ ದಿನ ಬಳಕೆಯ ವಸ್ತುಗಳನ್ನ ಖರೀದಿಸಲು ತೊಂದರೆ ಅನುಭವಿಸುತ್ತಿರುವ ಕಾರಣ ಜಿಲ್ಲೆಯಲ್ಲಿ ಸಂಚಾರಿ ಕಿರಾಣಿ ಅಂಗಡಿ ಆರಂಭಿಸಲಾಗಿದೆ.
ಚಿತ್ರದುರ್ಗದಲ್ಲಿ ನೀವು ಇದ್ದ ಕಡೆ ಬರುತ್ತೆ ಈ ಸಂಚಾರಿ ಕಿರಾಣಿ ಅಂಗಡಿ!
ನಿಂಗಪ್ಪನವರ ಮೊಬೈಕ್ ಕಿರಾಣಿ ಅಂಗಡಿಯಲ್ಲಿ ಬೆಲ್ಲ, ಗೋಧಿ ಹಿಟ್ಟು, ರಾಗಿ, ಮೈದಾ, ಹೆಸರು ಕಾಳು, ಶೇಂಗಾಬೀಜ, ಕಡಲೆ ಕಾಳು ಸೇರಿದಂತೆ ದಿನ ಬಳಕೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳು ದೊರೆಯುತ್ತವೆ.
ಜನ ಇರುವ ಕಡೆ ತೆರಳಿ ಸಂಚಾರಿ ದಿನಸಿ (ಕಿರಾಣಿ) ಅಂಗಡಿ ತರಕಾರಿಯನ್ನ ಮಾರಾಟ ಮಾಡಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಒಂದಷ್ಟು ವ್ಯಾಪಾರ ತಂತ್ರ ಬಳಸಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಿ.ಮಹದೇವಪುರದ ನಿಂಗಪ್ಪ ದಂಪತಿ ಲಾಕ್‍ಡೌನ್ ಸಡಿಲಿಕೆಯಾದರೂ ದೂರದ ಪಟ್ಟಣಗಳಿಗೆ ವಾಹನ ಸೌಲಭ್ಯವಿಲ್ಲದೆ, ಅಗತ್ಯ ವಸ್ತುಗಳು ಸಿಗದೆ ಇರುವ ಜನರಿಗೆ ಆಸರೆಯಾಗುತ್ತಿದ್ದಾರೆ.
ಈ ಮೊಬೈಲ್ ಕಿರಾಣಿ ಅಂಗಡಿಯಲ್ಲಿ ಏನೆಲ್ಲಾ ಸಿಗುತ್ತೆ?
ನಿಂಗಪ್ಪನವರ ಮೊಬೈಕ್ ಕಿರಾಣಿ ಅಂಗಡಿಯಲ್ಲಿ ಬೆಲ್ಲ, ಗೋಧಿ ಹಿಟ್ಟು, ರಾಗಿ, ಮೈದಾ, ಹೆಸರು ಕಾಳು, ಶೇಂಗಾಬೀಜ, ಕಡಲೆ ಕಾಳು ಸೇರಿದಂತೆ ದಿನ ಬಳಕೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳು ದೊರೆಯುತ್ತವೆ.