ಚಿತ್ರದುರ್ಗ:ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹತಾಶರಾಗಿದ್ದಾರೆ. ಇಲ್ಲವೇ ಯಾವುದೋ ಪ್ರಭಾವಕ್ಕೆ ಒಳಗಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೀಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ನ ಮುಖಂಡ ವಿ.ಎಸ್. ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್‌ಡಿಕೆ ಅವ್ರ ಹೇಳಿಕೆಗಳನ್ನು ನೋಡಿದ್ರೆ ಯಾವುದೋ ಪ್ರಭಾವಕ್ಕೆ ಒಳಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಅನಿಸುತ್ತದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ್ರೆ ಬಿಜೆಪಿ ವಿರುದ್ಧವಾಗಿ, ನಮ್ಮ ಸರ್ಕಾರ ಬೀಳಿಸಲು ಜಿಜೆಪಿ ನಾಯಕರೇ ಕಾರಣ ಎಂದು ಹೇಳಿಕೆ ನೀಡಿ, ಬೈದಿದ್ದರು. ಇಂದು ಅವ್ರೇ ಹೇಳ್ತಿದ್ದಾರೆ ಬಿಜೆಪಿಯವರು ಒಳ್ಳೆಯವರು, ಕಾಂಗ್ರೆಸ್ ಸಹವಾಸ ಮಾಡಿ ತಪ್ಪು ಮಾಡಿದೆ ಅಂತ. ಆದ್ರೆ ಕಾಂಗ್ರೆಸ್ನ 145 ಜನ ಬೆಂಬಲ ನೀಡಿದರ ಫಲವಾಗಿ ಹೆಚ್. ಡಿ. ದೇವೇಗೌಡರು ಪ್ರಧಾನಿಯಾದರು ಎಂದು ಉಗ್ರಪ್ಪ ಹೆಚ್‌ಡಿಕೆ ತಿರುಗೇಟು ನೀಡಿದ್ದಾರೆ.