ಚಿತ್ರದುರ್ಗ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಂತಹ ಆತ್ಮಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಪತ್ರಕರ್ತರು ಗೌರವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಚಿತ್ರದುರ್ಗದಲ್ಲಿ ಹುತಾತ್ಮ ಯೋಧರಿಗೆ ಮೌನಚರಣೆ ಮೂಲಕ ಭಾವಪೂರ್ವ ಶ್ರದ್ಧಾಂಜಲಿ - ಪತ್ರಕರ್ತರು
ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೋಟೆನಾಡಿನಲ್ಲಿ ಶ್ರದ್ದಾಂಜಲಿ ಸಲ್ಲಿಸಿದ ಪತ್ರಕರ್ತರು ಉಗ್ರರ ವಿರುದ್ಧ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ
ನಗರದ ಪತ್ರಿಕ ಭವನದ ಎದುರು ಜಮಾಯಿಸಿದ ಜಿಲ್ಲಾ ಪತ್ರಕರ್ತರು, ಒಂದು ನಿಮಿಷ ಮೌನಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅಟ್ಟಾಹಾಸ ಮೆರೆದ ಉಗ್ರರ ಕೃತ್ಯವನ್ನು ಖಂಡಿಸಿ ಪ್ರತಿಭಟಿಸಿದರು.
ಅಟ್ಟಹಾಸ ಮೆರೆದಿರುವ ಉಗ್ರರ ಸದೆಬಡಿಯುವಂತೆ ಪ್ರಧಾನಿ ಮೋದಿಯವರಿಗೆ ಒತ್ತಾಯಿಸಿದರು.