ಕರ್ನಾಟಕ

karnataka

ETV Bharat / state

ಕೋಟೆನಾಡಿನಲ್ಲಿ ಯ್ಯಾ.. ಛೀ-ಥೂ ಚಳವಳಿ..  ಅತೃಪ್ತ ಶಾಸಕರಿಗೆ ಎಲೆ ಅಡಿಕೆ ಹಾಕಿ ಕ್ಯಾಕರಿಸಿ ಉಗಿದರು.. - Kannada news

ಅತೃಪ್ತ ಶಾಸಕರಿಗೆ ಮತ್ತು ಮೂರೂ ಪಕ್ಷಗಳಿಗೆ ಎಲೆ ಅಡಿಕೆ ಹಾಕಿ ಉಗುಳುವ ಛೀ ಥೂ ಎಂಬ ಚಳವಳಿಯನ್ನು ಜಿಲ್ಲೆಯ ರೈತರು ಹಮ್ಮಿಕೊಳ್ಳುವ ಮೂಲಕ ರಾಜೀನಾಮೆ ನಾಟಕ ಆಡುತ್ತಿರುವ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

'ಛೀ ಥೂ ಚಳುವಳಿ'

By

Published : Jul 15, 2019, 5:31 PM IST

ಚಿತ್ರದುರ್ಗ :ರಾಜ್ಯ ರಾಜಕೀಯ ನಾಯಕರ ದೊಂಬರಾಟ ನೋಡಿ ಬೇಸತ್ತ ಕೋಟೆನಾಡಿನ ರೈತರು ವಿನೂತನ ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಛೀ ಥೂ ಚಳವಳಿ'

ಕರ್ನಾಟಕ ರಾಜ್ಯ ರೈತ ಸಂಘಟನೆ ಕಾರ್ಯಕರ್ತರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಛೀ ಥೂ ಚಳವಳಿಯ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ನಗರದ ಗಾಂಧಿ ವೃತ್ತದಲ್ಲಿ ಅತೃಪ್ತ ಶಾಸಕರ ಹಾಗೂ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಮೂರು ಪಕ್ಷಗಳ ಹೆಸರುಗಳಿರುವ ಪ್ರತಿಕೃತಿಗಳಿಗೆ ರೈತರು ಕ್ಯಾಕರಿಸಿ ಉಗುಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details