ಚಿತ್ರದುರ್ಗ :ಜಿಲ್ಲೆಯ ಹೃದಯಭಾಗದಿಂದ ಹಾದು ಹೋಗಿರೋರಾಷ್ಟ್ರೀಯ ಹೆದ್ದಾರಿ ಜನರ ಪ್ರಾಣ ಬಲಿ ಪಡೆಯುತ್ತಿದೆ. ಹೆದ್ದಾರಿಯ ಕೆಲ ಭಾಗಗಳಲ್ಲಿ ಕಾಮಗಾರಿ ಕೂಡ ನಡೆಯುತ್ತಿದೆ. ಮಳೆಯಿಂದಾಗಿ ಗುಂಡಿ ಯಾವುದೋ, ರಸ್ತೆ ಯಾವುದೋ ಎಂದು ತಿಳಿಯದೆ ವಾಹನ ಚಾಲಕರು ಹೈರಾಣಾಗಿದ್ದಾರೆ. ಕೆಲವರು ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳಿವೆ. ಸುಮಾರು 200 ಕಿ.ಮೀ.ನಷ್ಟು ವಿಸ್ತೀರ್ಣ ಹೊಂದಿವೆ. ಇದೇ ಹೆದ್ದಾರಿಗಳಲ್ಲಿ ವರ್ಷಕ್ಕೆ 300 ಜನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ಬೆಂಗಳೂರು-ಮುಂಬೈಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಮುಂಬೈ ರಸ್ತೆ ಚಿತ್ರದುರ್ಗ ನಗರದ ಹೃದಯ ಭಾಗದಿಂದ ಹಾದು ಹೋಗಿದೆ.
ಹಿರಿಯೂರಿನಿಂದ ಆರಂಭವಾಗುವ ಈ ರಾಷ್ಟ್ರೀಯ ಹೆದ್ದಾರಿ ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯ ಲಕ್ಕಮುತ್ತೇನ ಹಳ್ಳಿಗೆ ಕೊನೆಗೊಳ್ಳುತ್ತೆ. 200 ಕಿ.ಮೀ ಉದ್ದದ ವಿಸ್ತೀರ್ಣ ಹೊಂದಿರುವ ಈ ಹೆದ್ದಾರಿಯಲ್ಲಿ ಮಳೆ ಬಂದ್ರೆ ವಾಹನ ಸವಾರರಿಗೆ ತೊಂದರೆ ತಪ್ಪಿದ್ದಲ್ಲ. ಈ ಹೆದ್ದಾರಿಯಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದರಿಂದ ಸಾಕಷ್ಟು ಗುಂಡಿಗಳನ್ನು ತೆರೆಯಲಾಗಿದೆ. ಮಳೆ ಸುರಿಯುವ ವೇಳೆ ಸಾಕಷ್ಟು ಪ್ರಯಾಣಿಕರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.