ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಚಿತ್ರದುರ್ಗದ ಪುರ ಪ್ರವೇಶಿಸಿದೆ. ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಿಂದೂ ಮಹಾಗಣಪತಿಯ ಪುರ ಪ್ರವೇಶದ ವೇಳೆ ಸ್ವಾಗತಿಸಿದರು.
ಕೋಟೆನಾಡನ್ನು ಪ್ರವೇಶಿಸಿದ ಮಹಾ ಗಣಪತಿ.. ಅದ್ಧೂರಿ ಮೆರವಣಿಗೆ - chitradurganews
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಚಿತ್ರದುರ್ಗದ ಪುರ ಪ್ರವೇಶಿಸಿದೆ.
ಕೋಟೆನಾಡನ್ನು ಪ್ರವೇಶಿಸಿದ ಹಿಂದೂ ಮಹಾ ಗಣಪತಿ
ನಂತರ ಗಣೇಶನ ಮೂರ್ತಿಯನ್ನು ಚಿತ್ರದುರ್ಗ ನಗರದಾದ್ಯಂತ ಮೆರವಣಿಗೆ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಲಾಯಿತು. ಪುರಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಮಾರ್ಗದುದ್ದಕ್ಕೂ ಜಯಘೋಷ ಹಾಕುತ್ತ ವಾದ್ಯಗಳ ನಾದಕ್ಕೆ ಸಖತ್ ಸ್ಟೆಪ್ ಹಾಕಿ ಸಂಭ್ರಮಿಸಿದರು. ಗಣೇಶನ ಮೂರ್ತಿಯನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯಿಂದ ತರಿಸಲಾಗಿದ್ದು, ಗಣಪತಿ ಆಗಮನಕ್ಕೆ ಜನ ಸಾಮಾನ್ಯರು ಸಂತೋಷ ವ್ಯಕ್ತಪಡಿಸಿದರು.