ಚಿತ್ರದುರ್ಗ:ಒಳ ಮೀಸಲಾತಿಯ ಬಗ್ಗೆ ಸುರ್ಪೀಂಕೋರ್ಟ್ ನೀಡಿರುವ ತೀರ್ಪು ಉಸಿರಿಲ್ಲದ ಸಮುದಾಯಕ್ಕೆ ಉಸಿರು ಬಂದಂತಾಗಿದೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ಸುಪ್ರೀಂ ತೀರ್ಪು ಉಸಿರಿಲ್ಲದ ಸಮುದಾಯಕ್ಕೆ ಉಸಿರು ಬಂದಂತಾಗಿದೆ: ಹೆಚ್.ಆಂಜನೇಯ
ಸುಪ್ರೀಂಕೋರ್ಟ್ ಒಳ ಮೀಸಲಾತಿಯ ಬಗ್ಗೆ ನೀಡಿರುವ ತೀರ್ಪನ್ನು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಸ್ವಾಗತಿಸಿದ್ದಾರೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮೀಸಲಾತಿಯಲ್ಲಿ ಒಳ ಮೀಸಲಾತಿಗಾಗಿ ಹಲವು ವರ್ಷಗಳ ಕಾಲದಿಂದ ನಡೆದುಕೊಂಡು ಬಂದ ಹೋರಾಟಕ್ಕೆ ಫಲ ಸಿಕ್ಕಿರುವುದಕ್ಕೆ ನಾನು ಸ್ವಾಗತ ಮಾಡ್ತೀನಿ. ಮೀಸಲಾತಿ ನೀಡುವ ಸಲುವಾಗಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಇದನ್ನು ಬಗೆ ಹರಿಸಲು ಏಳು ಜನ ಅಥವಾ ಹನ್ನೊಂದು ಜನ ನ್ಯಾಯಾಧೀಶರನ್ನು ನೇಮಕ ಮಾಡ್ತಾರೋ ಗೊತ್ತಿಲ್ಲ. ಆದ್ರೆ ನಮ್ಮ ಸಮುದಾಯಕ್ಕೆ ಸಮಾನತೆ, ನ್ಯಾಯವನ್ನು ಒದಗಿಸಿಕೊಡ್ತಾರೆ ಎಂಬ ವಿಶ್ವಾಸವಿದೆ ಎಂದರು.
ಈ ತೀರ್ಪಿಗಾಗಿ ಹಲವು ವರ್ಷಗಳಿಂದ ಸಾಮಾಜಿಕ ಹೋರಾಟ ಮಾಡಿಕೊಂಡು ಬಂದವರು ನಾವು, ಕೆಲವೇ ಜಾತಿಗಳಿಗೆ ಮೀಸಲಾತಿ ಸಿಗದೆ ಎಲ್ಲಾ ಜಾತಿಯವರಿಗೂ ಉಪಯೋಗ ಆಗಲೆಂದು ಹರ್ಷ ವ್ಯಕ್ತಪಡಿಸಿದರು.