ಚಿತ್ರದುರ್ಗ:ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಕೆಂಗಟ್ಟ ಕೊರೊನಾ ಸೋಂಕಿತರೊಬ್ಬರು ಎಮರ್ಜೆಸ್ಸಿ ವಾರ್ಡ್ನ ನೆಲದ ಮೇಲೆ ಮಲಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವರೇ ನಿಮಗೆ ಇದು ಸರಿಯೇ, ನಿಮ್ಮ ಕಣ್ಣಿಗೆ ಬಡ ರೋಗಿಗಳು ಕಾಣುತ್ತಿಲ್ಲವೇ ಎಂಬ ಪ್ರೆಶ್ನೆಗಳು ಎದ್ದಿವೆ. ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ವೀರ ಕರಿಯಪ್ಪ ಎಂಬುವವರು ನಾಲ್ಕು ದಿನಗಳಿಂದ ಜ್ವರದಿಂದ ಬಳಲಿದ್ದು, ಅವರ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ತಿಳಿದು ಆಸ್ಪತ್ರೆಯ ಮೊರೆ ಹೋಗಿದ್ದಾಗ ಈ ಘಟನೆ ನಡೆದಿದೆ.