ಕರ್ನಾಟಕ

karnataka

By

Published : Aug 16, 2020, 8:08 PM IST

ETV Bharat / state

ಚಿತ್ರದುರ್ಗದಲ್ಲಿಂದು 67 ಜನರಿಗೆ ಕೊರೊನಾ ದೃಢ: 1,530 ಕ್ಕೇರಿದ ಸೋಂಕಿತರ ಸಂಖ್ಯೆ

ಚಿತ್ರದುರ್ಗ ಜಿಲ್ಲೆಯ ಕೊರೊನಾ ಪ್ರಕರಣಗಳ ಕುರಿತ ವರದಿ ಇಲ್ಲಿದೆ.

Chitradurga District
ಚಿತ್ರದುರ್ಗದಲ್ಲಿಂದು 67 ಜನರಿಗೆ ಕೊರೊನಾ ದೃಢ

ಚಿತ್ರದುರ್ಗ:ಜಿಲ್ಲೆಯಲ್ಲಿಂದು 67 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,530 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಹಲವೆಡೆ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ 120 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 34, ಹಿರಿಯೂರು 01, ಹೊಸದುರ್ಗ 23 ಹಾಗೂ ಹೊಳಲ್ಕೆರೆ 09 ಸೇರಿದಂತೆ ಒಟ್ಟು 67 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 618 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ವರದಿಯಲ್ಲಿ 67 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಇದುವರೆಗೆ 19 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೇ 992 ಜನರು ಗುಣಮುಖರಾಗಿ ಬಿಡುಗಡೆಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 519 ಸಕ್ರಿಯ ಪ್ರಕರಣಗಳಿವೆ.

For All Latest Updates

ABOUT THE AUTHOR

...view details