ಕರ್ನಾಟಕ

karnataka

ETV Bharat / state

ಟೆಂಡರ್​ ಕೊಡಿಸದ ಕಾರಣಕ್ಕಾಗಿ ನನ್ನ ವಿರುದ್ಧ ಕಮಿಷನ್ ಆರೋಪ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವಿರುದ್ದ ಕಮಿಷನ್ ಆರೋಪ - ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಆರೋಪ - ಟೆಂಡರ್​ ಕೊಡಿಸದ ಹಿನ್ನೆಲೆ ನನ್ನ ಮೇಲೆ ದ್ವೇಷ - ಕಮಿಷನ್​ ಆರೋಪಕ್ಕೆ ಸ್ಪಷ್ಟನೆ ನೀಡಿದ ತಿಪ್ಪಾರೆಡ್ಡಿ

commission-allegation-against-mla-tippareddy-by-manjunath
ಟೆಂಡರ್​ ಕೊಡಿಸದ ಹಿನ್ನಲೆ ನನ್ನ ಮೇಲಿನ ದ್ವೇಷಕ್ಕೆ ಕಮಿಷನ್ ಆರೋಪ : ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

By

Published : Jan 16, 2023, 8:50 PM IST

ಟೆಂಡರ್​ ಕೊಡಿಸದ ಕಾರಣಕ್ಕಾಗಿ ನನ್ನ ವಿರುದ್ಧ ಕಮಿಷನ್ ಆರೋಪ

ಚಿತ್ರದುರ್ಗ:ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಹಾಗೂ ನನ್ನ ನಡುವೆ ಮೊದಲಿನಿಂದಲೂ ದ್ವೇಷವಿದೆ. ಆರೋಗ್ಯ ಇಲಾಖೆಯಲ್ಲಿ ಕೆ.ಹೆಚ್.ಎಸ್, ಡಿಪಿ ಯೋಜನೆಯ ಟೆಂಡರ್ ಮಂಜುನಾಥ್​ಗೆ ಕೊಡಿಸದ ವಿಚಾರಕ್ಕಾಗಿ ಆತ ನನ್ನ ಮೇಲೆ ಈ ರೀತಿ ಆರೋಪ ಮಾಡಿರುವುದಾಗಿ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಶಾಸಕ ತಿಪ್ಪಾರೆಡ್ಡಿ ವಿರುದ್ಧ ಶೇ 25ರಷ್ಟು ಕಮಿಷನ್ ಆರೋಪ ಮಾಡಲಾಗಿದ್ದು, ಆಡಿಯೋ ಕೂಡ ಬಿಡುಗಡೆ ಮಾಡಲಾಗಿದೆ.

ನನ್ನ ಮೇಲಿನ ದ್ವೇಷಕ್ಕೆ ಕಮಿಷನ್​ ಆರೋಪ :ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಹಿನ್ನೆಲೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಚ್ಚಂಗಿ ಯಲ್ಲಮ್ಮ ದೇಗುಲ ಕಾಮಗಾರಿ ಕಳಪೆಯಾಗಿದೆ. ಈಗ ಅದನ್ನು ಆರೋಪಿಸುವುದು ಸರಿಯಲ್ಲ. ಎಲ್ಲಾ ಕಾಮಗಾರಿ ವೇಳೆ ಆತನೇ ಸುಪ್ರೀಂ ರೀತಿ ವರ್ತನೆ ಮಾಡುತ್ತಾನೆ. ನಾನು ಅಧ್ಯಕ್ಷ ಎಂದು ದೌರ್ಜನ್ಯ ಮಾಡುತ್ತಾರೆ. ಅಷ್ಟು ಕೊಟ್ಟಿದೇನೆ, ಇಷ್ಟು ಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. ಆದರೆ ಯಾರಿಗೆ ಕೊಟ್ಟಿದ್ದಾನೆ ಎಂದು ಗೊತ್ತಿಲ್ಲ ಎಂದರು.

ಮಂಜುನಾಥ್​ ವಿರುದ್ಧ ಆರೋಪ ಮಾಡಿದ ತಿಪ್ಪಾರೆಡ್ಡಿ: ಗುತ್ತಿಗೆದಾರ ಮಂಜುನಾಥ್ ಯಾವುದೇ ಕಾಮಗಾರಿ ಮಾಡಿದರೂ ಆತ ಹೇಳಿದ್ದೇ ಫೈನಲ್ ಆಗಿತ್ತು. ಅಧಿಕಾರಿಗಳಿಗೆ ಬೆದರಿಸುತ್ತಿದ್ದ. ಸಣ್ಣಪುಟ್ಟ ಕಂಟ್ರಾಕ್ಟರ್​ಗಳು ಕೆಲಸ ಕೇಳಿದಾಗ ತಾರತಮ್ಯ ಮಾಡುತ್ತಿದ್ದ. ಯಾರ ಬೆಂಬಲಿಗರು, ಯಾವ ಪಕ್ಷದವರು ಎಂದು ಕೇಳುತ್ತಿದ್ದನು ಎಂದು ಶಾಸಕ ತಿಪ್ಪಾರೆಡ್ಡಿ ಅವರು ಮಂಜುನಾಥ್ ವಿರುದ್ಧ ಆರೋಪ ಮಾಡಿದರು.

ಆತ ಯುಜಿಡಿ ಕಾಮಗಾರಿ ವೇಳೆ ಪೈಪ್ ಲೈನ್ ಹೊಡೆದಿದ್ದನು. ಅದನ್ನು ಕೇಳಿದ್ದೆ. ಕೇಳಿರುವುದು ತಪ್ಪಾ. ಆತನ ಗುಣವೇ ಹೆದರಿಸಿ ಕೆಲಸ ಮಾಡುವುದಾಗಿದೆ. ವೈಯಕ್ತಿಕ ದ್ವೇಷದಿಂದ ಈ ರೀತಿ ಆರೋಪ ಮಾಡಿದ್ದಾರೆ. ಆಸ್ಪತ್ರೆಯ ಕೆ.ಹೆಚ್.ಎಸ್, ಡಿಪಿ ಯೋಜನೆಯ ಟೆಂಡರ್ ಕೊಡಿಸದ ಹಿನ್ನೆಲೆಯಲ್ಲಿ ಆರೋಪ ಮಾಡಲಾಗಿದೆ. ಈ ವಿಚಾರದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಶಾಸಕರು ಸ್ಪಷ್ಟನೆ ನೀಡಿದರು.

ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಆರೋಪ : ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕಮಿಷನ್ ಕುರಿತಂತೆ ಅವರ ಆಡಿಯೋ, ವಿಡಿಯೋ ನಮ್ಮ ಬಳಿ ಇದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರವನ್ನು ಆರಂಭಿಸಿದ್ದೇ ಶಾಸಕ ತಿಪ್ಪಾರೆಡ್ಡಿ ಎಂದು ಆರೋಪಿಸಿದರು. ಇವರ ಮೇಲೆ ಗುತ್ತಿಗೆದಾರರಿಂದ ಕಮಿಷನ್ ಕೇಳುತ್ತಿರುವ ಬಗ್ಗೆ ದೂರು ದಾಖಲಿಸಲಾಗಿದೆ. ಕಮಿಷನ್ ಕುರಿತಂತೆ ತಿಪ್ಪಾರೆಡ್ಡಿ ಜೊತೆ ಸಂಭಾಷಣೆ ಮಾಡಿರುವ ಆಡಿಯೋವನ್ನು ಇದೇ ವೇಳೆ ಬಹಿರಂಗಪಡಿಸಿದರು.

ಇನ್ನು ಮೊದಲ ಕೋವಿಡ್ ಅಲೆಯ ಸಂದರ್ಭದಲ್ಲಿ ತಿಪ್ಪಾರೆಡ್ಡಿ ಶೇ.10 ರಷ್ಟು ಕಮಿಷನ್ ಎರಡನೇ ಕೋವಿಡ್ ಅಲೆ ಸಂದರ್ಭದಲ್ಲಿ ಶೇ.10 ರಷ್ಟು ಕಮಿಷನ್ ಪಡೆದಿದ್ದಾರೆ. ಅದಲ್ಲದೆ ಮೆಡಿಕಲ್ ಗ್ಯಾಸ್ ರೂಂ ನಿರ್ಮಾಣದಲ್ಲಿ 4 ಲಕ್ಷ, ಲೇಔಟ್ ನಿರ್ಮಾಣದಲ್ಲಿ 4 ಲಕ್ಷ, ಲೇಔಟ್ ಅನುಮತಿಗಾಗಿ 18 ಲಕ್ಷ, ಆಸ್ಪತ್ರೆ ರಿಪೇರಿಗೆ 12.5 ಲಕ್ಷ ಒಟ್ಟು 2019 ರಿಂದ ಇಲ್ಲಿಯವರೆಗೂ 90 ಲಕ್ಷ ರೂ.ಗಳನ್ನು ಕಮಿಷನ್ ಹಣ ಪಡೆದಿರುವುದಾಗಿ ಮಂಜುನಾಥ್​​ ಆರೋಪಿಸಿದ್ದಾರೆ.

ಇದನ್ನೂ ಓದಿ :ನಾಲ್ಕು ವರ್ಷದಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ: ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್ ಮಂಜುನಾಥ್​ ಆರೋಪ

ABOUT THE AUTHOR

...view details