ಚಿತ್ರದುರ್ಗ: ಯುಗಾದಿ ಒಳಗೆ ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ. ಅದಕ್ಕಾಗಿ ಹೈಕಮಾಂಡ್ ಏನ್ ತೀರ್ಮಾನ ಮಾಡಬೇಕೊ ಮಾಡುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಿತ್ರದುರ್ಗ ನಗರದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಪಂಚಮಸಾಲಿ ಸಮುದಾಯ ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ , ದೇಶದಲ್ಲಿ ಹುಟ್ಟಿರುವ ಎಲ್ಲರಿಗೂ ಸಿಎಂ, ಪಿಎಂ ಆಗುವ ಅರ್ಹತೆ ಇದೆ. ಅಂತೆಯೇ ನಮಗೂ ಯಾಕ್ ಇರಬಾರದು ಎಂದು ಪ್ರಶ್ನಿಸಿದರು. ಬಿಎಸ್ ವೈ ಸಂಪುಟದಲ್ಲಿ ನಾನು ಮಂತ್ರಿ ಆಗುವುದಿಲ್ಲ. ನಾನು ಮಂತ್ರಿಯಾಗಲು ಮಠಾಧೀಶರ ಕಾಲು ಹಿಡಿಯಲ್ಲ. ಕೆಲವರು ಮಠಾಧೀಶರಿಂದ ಲಾಭಿ ಮಾಡಿಸಿ, ದಕ್ಷಿಣೆ ಕೊಟ್ಟು ಮಂತ್ರಿಯಾಗಿದ್ದಾರೆ ಆದ್ರೆ, ನಾನು ಅಂತರಾಜಕಾರಣಿ ಅಲ್ಲ, ನಾನು ಸ್ವಾಭಿಮಾನಿಎಂದಿರುವ ಅವರು ಯುಗಾದಿ ಹಬ್ಬದ ಬಳಿಕ ಎರಡನೇ ಹಂತದ ಯುಗ, ನಾಯಕತ್ವ ಪ್ರಾರಂಭವಾಗಲಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಪ್ರಾಮಾಣಿಕ, ಹಿಂದುತ್ವದ ಪರ ಇರುವ ರಾಜಕಾರಣಿ ಈ ರಾಜ್ಯಕ್ಕೆ ಅಗತ್ಯವಿದೆ.ಎಲ್ಲಾ ವರ್ಗದ ವಿಶ್ವಾಸ ಪಡೆದು ಸಿಎಂ ಆಗುವ ಕಾಲ ಸಮೀಪಿಸುತ್ತಿದೆ. ಉತ್ತರ ಕರ್ನಾಟಕದಿಂದ ಅಂತಹ ರಾಜಕಾರಣಿ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.