ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿ ಇರುವುದಕ್ಕೆ ಬೇಸರವಾಗುತ್ತಿದೆ: ಸಿಎಂ - ಚಿತ್ರದುರ್ಗದಕ್ಕೂ ಸಿಎಂ ಬಸವರಾಜ ಬೊಮ್ಮಾತಿ

ಸಮಾಜವಾದಿ ಪಕ್ಷದಿಂದ ಬಂದಿರುವ ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿರುವುದಕ್ಕೆ ನನಗೆ ಬಹಳ ಬೇಸರವಿದೆ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.

cm-basaraja-bommai-on-siddaramaiah
ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿ ಇರುವುದಕ್ಕೆ ಬೇಸರವಾಗುತ್ತಿದೆ: ಸಿಎಂ

By

Published : Oct 19, 2021, 3:59 AM IST

ಚಿತ್ರದುರ್ಗ:ನಾನು ಆರ್​ಎಸ್ಎಸ್​​ ಹಿಡಿತದಲ್ಲಿ ಇರುವುದಕ್ಕೆ ಬೇಸರವಿಲ್ಲ. ಆರ್​ಎಸ್ಎಸ್​ ರಾಷ್ಟ್ರ ಕಟ್ಟುವ ಕೆಲಸ ಮಾಡ್ತಿದೆ. ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿ ಇರುವುದಕ್ಕೆ ಬೇಸರವಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಚಿತ್ರದುರ್ಗದ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ

ನಾನು ರಾಷ್ಟ್ರ ಕಟ್ಟುವ ಕೆಲಸ ಮಾಡುವ ಸಂಘಟನೆಯ ಹಿಡಿತದಲ್ಲಿದ್ದೇನೆ ಅಂದುಕೊಳ್ಳಲಿ, ನಾನು ಸಮರ್ಪಣಾ ಭಾವದಿಂದ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದ್ದೇನೆಂದು ಸಿಎಂ ಹೇಳಿದ್ದಾರೆ.

ಸಮಾಜವಾದಿ ಪಕ್ಷದಿಂದ ಬಂದಿರುವ ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿರುವುದಕ್ಕೆ ನನಗೆ ಬಹಳ ಬೇಸರವಿದೆ ಎಂದು ಈ ವೇಳೆ ವ್ಯಂಗ್ಯವಾಡಿದ್ದಾರೆ. ಈ ಮೊದಲು ಸಿಎಂ ಅವರನ್ನು ಸಿದ್ದರಾಮಯ್ಯ ಆರ್​ಎಸ್ಎಸ್​ನ ರಿಮೋಟ್ ಕಂಟ್ರೋಲ್ ಎಂದು ಕರೆದಿದ್ದರು.

ಇದನ್ನೂ ಓದಿ:ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್​​ನ 13 ಮುಖಂಡರ ವಿರುದ್ದ ಎಸಿಬಿಗೆ ದೂರು

ABOUT THE AUTHOR

...view details