ಚಿತ್ರದುರ್ಗ:ನಮ್ ದುರ್ಗ ಸ್ವರ್ಗ ಎಂಬ ಮಾತಿಗೆ ತಕ್ಕಂತೆ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಅನೇಕ ಸ್ಥಳಗಳಿವೆ. ಸದ್ಯ ವಾಣಿವಿಲಾಸ ಸಾಗರದಿಂದ ನೀರು ಬಿಡುಗಡೆಯಾಗಿದ್ದರಿಂದ ಉಂಟಾಗಿರುವ ಝರಿಯು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ವಾಣಿವಿಲಾಸ ಸಾಗರದಿಂದ ನೀರು ಬಿಡುಗಡೆ: ಪ್ರವಾಸಿಗರನ್ನ ಸೆಳೆಯುತ್ತಿದೆ ಝರಿ!
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಲಾಗಿದ್ದು, ನೀರಿನ ಝರಿಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.
ಚಿತ್ರದುರ್ಗದಲ್ಲಿ ಏಳು ಸುತ್ತಿನ ಕೋಟೆ, ಜೋಗಿಮಟ್ಟಿ ವನ್ಯಧಾಮ, ವಾಣಿವಿಲಾಸ ಸಾಗರ ಸೇರಿದಂತೆ ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಲಾಗಿದ್ದು, ಇದೀಗ ಹಾಲ್ನೊರೆಯಂತಿರುವ ನೀರಿನ ಪುಟ್ಟ ಪುಟ್ಟ ಝರಿಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ. ವಾಣಿವಿಲಾಸ ಸಾಗರದ ಎದುರೇ ಈ ರಮಣೀಯವಾದ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.
ರೈತರಿಗೆ ಉಪಯೋಗವಾಗಲೆಂದು ಸರ್ಕಾರವು ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಿದ್ದು, ಅಣೆಕಟ್ಟೆಯ ಕೂಗಳತೆಯಲ್ಲಿ ಹಾಲ್ನೋರೆಯಂತೆ ಧುಮ್ಮಿಕ್ಕುತ್ತಿರುವ ನೀರಿನಲ್ಲಿ ಪ್ರವಾಸಿಗರು ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಸುಂದರ ದೃಶ್ಯದ ಫೋಟೋ ಕ್ಲಿಕ್ಕಿಸಲು ಮುಗಿಬೀಳುತ್ತಿದ್ದಾರೆ. ವಾಣಿವಿಲಾಸ ಸಾಗರ ಲಾಕ್ಡೌನ್ ಸಡಿಲಿಕೆ ಬಳಿಕ ಪ್ರವಾಸಿಗರಿಗೆ ಒಂದು ದಿನದ ಪಿಕ್ನಿಕ್ಗೆ ಹೇಳಿದ ಮಾಡಿಸಿದ ಸ್ಥಳವಾಗಿ ಮಾರ್ಪಟ್ಟಿದೆ.