ಕರ್ನಾಟಕ

karnataka

ETV Bharat / state

ಫಾಸ್ಟ್​ ಟ್ಯಾಗ್​ ಇಲ್ಲದ ವಾಹನ ಮಾಲೀಕರಿಗೆ ಡಬಲ್​ ಟೋಲ್​ ಶುಲ್ಕ... ಮೊದಲ ದಿನವೇ ತಟ್ಟಿದ ಬಿಸಿ

ಚಿತ್ರದುರ್ಗದ ಟೋಲ್ ಪ್ಲಾಜಾದಲ್ಲಿ ಫಾಸ್ಟ್​ ಟ್ಯಾಗ್ ಅಳವಡಿಸದ ವಾಹನಗಳ ಚಾಲಕರು ಹಣ ಕಟ್ಟಲು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

Toll
ಟೋಲ್​

By

Published : Jan 16, 2020, 5:37 PM IST

ಚಿತ್ರದುರ್ಗ: ಟೋಲ್ ಪ್ಲಾಜಾಗಳಲ್ಲಿ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಫಾಸ್ಟ್ ಟ್ಯಾಗ್ ಅಳವಡಿಕೆ ನಿಯಮದಿಂದ ವಾಹನ ಚಾಲಕರಿಗೆ ಹಾಗೂ ಮಾಲೀಕರಿಗೆ ಕಿರಿ ಕಿರಿ ಉಂಟಾಗುತ್ತಿದೆ. ಅದೆಷ್ಟೋ ಫಾಸ್ಟ್ ಟ್ಯಾಗ್ ಅಳವಡಿಸದ ವಾಹನಗಳ ಚಾಲಕರು ಹಣ ಕಟ್ಟಲು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ.

ವಾನಹ ಚಾಲಕರಿಗೆ, ಮಾಲೀಕರಿಗೆ ತಟ್ಟಿದ ಫಾಸ್ಟ್ ಟ್ಯಾಗ್ ಬಿಸಿ

ಮೊದಲ ದಿನ ಇಂದು ವಾಹನ ಚಾಲಕ ಮಾಲೀಕರಿಗೆ ಇದರ ಬಿಸಿ ತಟ್ಟಿದ್ದು, ಫಾಸ್ಟ್ ಟ್ಯಾಗ್ ಟೋಲ್ ಲೇನ್ ಖಾಲಿ ಖಾಲಿ ಹೊಡೆಯುತ್ತಿದ್ದು, ಇದರ ಬದಲಾಗಿ ಕ್ಯಾಷ್ ಲೈನ್ ನಲ್ಲಿ ಹಣ ಕಟ್ಟಲು ಚಾಲಕರು, ಮಾಲೀಕರು ಕಿ.ಮೀಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗುಯಿಲಾಳು ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಫಾಸ್ಟ್ ಟ್ಯಾಗ್ ಇಲ್ಲದ ವಾಹನ ಚಾಲಕರು ಭಾರಿ ಗೊಂದಲಕ್ಕೊಳಗಾಗಿದ್ದಾರೆ. ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಫಾಸ್ಟ್ಯಾಗ್ ಲೇನ್​ನಲ್ಲಿ ಡಬಲ್ ಶುಲ್ಕ ವಿಧಿಸುತ್ತಿರುವುದ್ದರಿಂದ ಕೆಲ ಚಾಲಕರ ಆಕ್ರೋಶಕ್ಕೆ ಕಾರಣವಾಯಿತು.

ಇನ್ನೂ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಲು ಟೋಲ್ ಪ್ಲಾಜಾದಲ್ಲೇ ಕೌಂಟರ್ ಆರಂಭ ಮಾಡಿದ್ದು, ಸೂಕ್ತ ದಾಖಲೆಗಳಾದ ವಾಹನದ ಪೊಟೋ, ಡಿಎಲ್, ಆರ್ಸಿ ಪುಸ್ತಕ, ವಾಹನ ಮಾಲೀಕರ ಒಂದು ಪೊಟೊ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಫಾಸ್ಟ್ ಟ್ಯಾಗ್ ಮಾಡಿಸಿಕೊಳ್ಳಬೇಕಾಗಿದೆ.

ABOUT THE AUTHOR

...view details