ಚಿತ್ರದುರ್ಗ: ಮಹಾಮಾರಿ ಕೊರೊನಾ ನಡುವೆ ಚಿಕೂನ್ ಗುನ್ಯಾ ಕೂಡ ಅಟ್ಟಹಾಸ ಮೆರೆಯಲು ಸಜ್ಜಾಗುತ್ತಿದೆ.
ಚಿತ್ರದುರ್ಗದಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ಬೆಳಕಿಗೆ .. ಒಂದು ಕಾಲದಲ್ಲಿ ಸೊಳ್ಳೆಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದ್ದ ಚಿಕೂನ್ ಗುನ್ಯಾ ಖಾಯಿಲೆ ಇದೀಗ ಚಿತ್ರದುರ್ಗದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಮಹಾಮಾರಿ ಕೊರೊನಾ ಕಾಡುತ್ತಿರುವ ನಡುವೆ ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗುತ್ತಿರುವುದು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.
2015-16 ರಲ್ಲಿ ಕಾಣಿಸಿಕೊಂಡಿದ್ದ ಚಿಕೂನ್ ಗುನ್ಯಾ ರೋಗ ಇದೀಗ ಮತ್ತೆ ಕಾಣಿಸಿಕೊಂಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ 57 ಚಿಕೂನ್ ಗುನ್ಯಾ ಪ್ರಕರಣಗಳು ಕಂಡು ಬಂದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಕಳೆದ ವರ್ಷ ಅಂದರೆ, 2019ರಲ್ಲಿ 61 ಪ್ರಕರಣಗಳು ಪತ್ತೆಯಾಗಿದ್ದವು. ಆದ್ರೆ ಈ ವರ್ಷ ಮುಗಿಯುವ ಮೊದಲೇ 57 ಪ್ರಕರಗಳು ಪತ್ತೆಯಾಗಿರುವುದು ಜಿಲ್ಲಾ ವೈದ್ಯಕೀಯ ಸಿಬ್ಬಂದಿಗೆ ತಲೆ ಬಿಸಿಯಾಗಿದೆ. ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆ ಇದರ ಬಗ್ಗೆ ಜಿಲ್ಲಾದ್ಯಂತ ಜಾಗೃತಿ ಮೂಡಿಸುತ್ತಿದೆ. ಅಲ್ಲದೇ ನೀರಿನ ಮೇಲೆ ಸೊಳ್ಳೆ ಕೂರದಂತೆ ನೋಡಿಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ.
ಸೊಳ್ಳೆ ಮೂಲಕ ಹರಡುವ ಈ ಚಿಕೂನ್ ಗುನ್ಯಾ 2015-16 ರಲ್ಲಿ ಆತಂಕ ಮೂಡಿಸಿತ್ತು. ಇದೀಗ ಮತ್ತೆ ಜಿಲ್ಲೆಯಲ್ಲಿ ಪ್ರಕರಣಗಳು ಕಂಡು ಬಂದಿರುವುದಕ್ಕೆ ಯಾವುದೇ ಭಯ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯಧಿಕಾರಿ ಜನರಲ್ಲಿ ಧೈರ್ಯ ತುಂಬಿದರು. ಇನ್ನು ಈ ಚಿಕೂನ್ ಗುನ್ಯಾ ವೈರಸ್ ಕಳೆದ ಕೆಲ ವರ್ಷಗಳ ಹಿಂದೆ ಅಟ್ಟಹಾಸ ಮೆರಿದಿತ್ತು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಸೇರಿದ್ದಂತೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಹೊಬ್ಬಳಿ ಚಿಕೂನ್ ಗುನ್ಯಾದಿಂದ ತತ್ತರಿಸಿ ಹೋಗಿದ್ದವಂತೆ. ಅಚ್ಚರಿ ಎಂದರೆ ಕೆಲವರನ್ನು ಈ ಚಿಕೂನ್ ಗುನ್ಯಾ ಖಾಯಿಲೆ ಬಲಿ ಪಡೆದಿತ್ತು ಎನ್ನುತ್ತಾರೇ ಸ್ಥಳೀಯರು.
ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಹಾವಳಿ ಮಧ್ಯೆ ಚಿಕೂನ್ ಗುನ್ಯಾ ಸೋಂಕು ಹೆಚ್ಚಾಗುತ್ತಿದ್ದು, ಈಗಾಗಲೇ 57 ಪ್ರಕರಣಗಳು ಪತ್ತೆಯಾಗಿವೆ. ರೋಗ ಹೆಚ್ಚಾಗುವ ಮೊದಲು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕಾಗಿದೆ.