ಚಿತ್ರದುರ್ಗ: ರಾಯಚೂರು ಹಾಗೂ ಚಿತ್ರದುರ್ಗ ಬದಲಿಗೆ ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ಆರೋಗ್ಯ ಸಚಿವ ಶ್ರೀರಾಮುಲು ದುಂಬಾಲು ಬಿದ್ದಿದ್ದರು.ಇದೀಗ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವಾಸ್ತವ್ಯ ಹೂಡಬೇಕಿದ್ದ ಅವರು ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಈ ಮೂಲಕ ಜಿಲ್ಲೆಯ ಮೇಲೆ ಅವರ ಮಲತಾಯಿ ಧೋರಣೆಗೆ ಮತ್ತೊಮ್ಮೆ ಸಾಕ್ಷಿಯಾಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವಾಸ್ತವ್ಯ ರದ್ದು: ಮಲತಾಯಿ ಧೋರಣೆ ತೋರಿದ್ರಾ ಶ್ರೀ ರಾಮುಲು?
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವಾಸ್ತವ್ಯ ಹೂಡಬೇಕಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅದನ್ನು ರದ್ದು ಪಡಿಸಿದ್ದಾರೆ. ಇದು ಅವರು ಜಿಲ್ಲೆಯ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂಬ ಅನುಮಾನ ಹುಟ್ಟು ಹಾಕಿದೆ.
ನಿನ್ನೆ ಸಂಜೆ 7 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಬೇಕಿದ್ದ ಸಚಿವ ಶ್ರೀ ರಾಮುಲು ದಿಢೀರ್ ಕಾರ್ಯಕ್ರಮವನ್ನು ರದ್ದು ಮಾಡಿ ಸಮಸ್ಯೆ ಹೇಳಿಕೊಳ್ಳಲು ಆಗಮಿಸಿದ್ದ ಜಿಲ್ಲೆಯ ಜನರಿಗೆ ಬೇಸರ ತರಿಸಿದ್ದಾರೆ.
ವಾಸ್ತವ್ಯಕ್ಕೆ ಬರೋದಿಲ್ಲ, ಜಿಲ್ಲಾಸ್ಪತ್ರೆಗೆ ಸರ್ಪೈಸ್ ವಿಸೀಟ್ ಕೊಡ್ತಿನಿ ಎಂದು ಮಾಹಿತಿ ನೀಡಿರುವ ಅವರು ವಾಸ್ತವ್ಯ ಮಾಡದೆ ಜಾರಿಕೊಂಡರು. ಶ್ರೀ ರಾಮುಲು ಆಗಮನದ ಹಿನ್ನೆಲೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಇಡೀ ಆಸ್ಪತ್ರೆಯನ್ನು ಸ್ವಚ್ಛಗೊಳಿಸಿ ಸಕಲ ಸಿದ್ಧತೆ ಮಾಡಿಕೊಳ್ಳುವ ಮೂಲಕ ರಾಮುಲು ಅವರ ಹಾದಿಯನ್ನು ಕಾದುಕೂತಿದ್ರು. ಆದ್ರೆ ರಾಮುಲು ದಿಢೀರ್ ಕಾರ್ಯಕ್ರವನ್ನು ರದ್ದಗೊಳಿಸಿ ಅಚ್ಚರಿ ಮೂಡಿಸಿದರು.