ಚಿತ್ರದುರ್ಗ: ಭೋವಿ ಸಮುದಾಯದಿಂದ ಬಿಜೆಪಿ ಅಭ್ಯರ್ಥಿ ಎ.ನಾರಾಯಣ ಸ್ವಾಮಿಯನ್ನು ಬೆಂಬಲಿಸಬೇಕೋ ಬೇಡವೋ ಎಂಬ ನಿರ್ಣಾಯಕ ಸಭೆಯನ್ನು ನಡೆಸಲಾಯಿತು.
ಚಿತ್ರದುರ್ಗದಲ್ಲಿ ಬಿಜೆಪಿ ಸೋಲಿಸಲು ಭೋವಿ ಸಮುದಾಯ ತೀರ್ಮಾನ
ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಇದೇ 18 ಕ್ಕೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಇಡೀ ಭೋವಿ, ಕೊರಚ, ಕೊರಮ, ಲಂಬಾಣಿ ಸಮುದಾಯದವರು ಸೇರಿದಂತೆ 99 ಉಪ ಸಮುದಾಯಗಳು ಕಾಂಗ್ರೆಸ್ಗೆ ಮತ ಚಲಾಯಿಸಲು ನಿರ್ಧರಿಸಿವೆ.
ಈ ಸಭೆಯಲ್ಲಿ ಇದೇ 18ಕ್ಕೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಇಡೀ ಭೋವಿ, ಕೊರಚ, ಕೊರಮ, ಲಂಬಾಣಿ ಸಮುದಾಯದವರು ಸೇರಿದಂತೆ 99 ಉಪ ಸಮುದಾಯಗಳು ಕಾಂಗ್ರೆಸ್ಗೆ ಮತ ಚಲಾಯಿಸಲು ನಿರ್ಧರಿಸಿವೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹಾಗೂ ಭೋವಿ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ನಗರದ ವಿದ್ಯಾ ನಗರದಲ್ಲಿ ನಡೆದಂತಹ ಗೌಪ್ಯ ಸಭೆಯಲ್ಲಿ ಸದಾಶಿವ ಆಯೋಗದ ವಿರುದ್ಧ ಇದ್ದ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣ ಸ್ವಾಮಿಯನ್ನು ಸೋಲಿಸಿಯೇ ತೀರುತ್ತೇವೆ ಎಂದು ಭೋವಿ ಸಮುದಾಯ ಪಣ ತೊಟ್ಟಿದೆ.