ಕರ್ನಾಟಕ

karnataka

ETV Bharat / state

ವಿದ್ಯುತ್​ ವ್ಯತ್ಯಯ, ನೆಟ್​ವರ್ಕ್​ ಸಮಸ್ಯೆ.. ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡ ಗ್ರಾಮಸ್ಥರು

ವಿದ್ಯುತ್​ ವ್ಯತ್ಯಯವಾಗಿ ನೆಟ್‍ವರ್ಕ್ ಕಟ್ ಆದ ಹಿನ್ನೆಲೆ ಗ್ರಾಮಸ್ಥರು ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ.

Villagers climbed the hill to make Ayushman card in Chikkamagaluru
ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡ ಗ್ರಾಮಸ್ಥರು

By

Published : Nov 9, 2022, 3:25 PM IST

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ಹಾಗೂ ಕಾರ್ಲೆ ಗ್ರಾಮಸ್ಥರು ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡ ವಿಚಿತ್ರ ಘಟನೆ ನಡೆದಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕೇಂದ್ರ ಸರ್ಕಾರದ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಹಳ್ಳಿಗರಿಗೆ ನೋಂದಣಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ, ಸಂಸೆ, ಕಾರ್ಲೆ, ಕಳಕೋಡು ಗ್ರಾಮದಲ್ಲಿ ನೆಟ್‍ವರ್ಕ್ ಸಮಸ್ಯೆ ಹೆಚ್ಚಾಗಿದೆ. ಕರೆಂಟ್ ಹೋದರೆ ನೆಟ್‍ವರ್ಕ್ ಕಟ್ ಆಗುತ್ತದೆ. ಮಾಡಿದ ಕೆಲಸವೆಲ್ಲ ವ್ಯರ್ಥವಾಗುತ್ತೆ. ವಿದ್ಯುತ್ ವ್ಯತ್ಯಯವಾದ ಹಿನ್ನೆಲೆ ಧರ್ಮಸ್ಥಳ ಸಂಘದವರು ಸಮೀಪದ ಗುಡ್ಡ ಹತ್ತಿ ನೆಟ್‍ವರ್ಕ್ ಹುಡುಕಿದ್ದಾರೆ. ಹಳ್ಳಿಗರಿಗೆ ಅಲ್ಲೇ ಕಾರ್ಡ್ ನೋಂದಣಿ ಮಾಡಿಕೊಟ್ಟಿದ್ದಾರೆ.

ಕಾರ್ಡ್ ನೋಂದಣಿ ವೇಳೆಯೂ ವಿದ್ಯುತ್ ಕೈಕೊಟ್ಟಿತ್ತು. ಸಂಸೆಯಲ್ಲಿ ಮೊಬೈಲ್ ನೆಟ್‍ವರ್ಕ್ ಕೂಡ ಕಡಿತವಾಗಿತ್ತು. ಆದ್ರೆ, ಕೆಲಸ ಮಾಡಲೇಬೇಕು ಅಂತ ಸಂಘಟಕರು ನೆಟ್‍ವರ್ಕ್ ಹುಡುಕಿ ಗುಡ್ಡಕ್ಕೆ ಹೋಗಿದ್ದರು. ಗುಡ್ಡದಲ್ಲಿ ನೆಟ್‍ವರ್ಕ್ ಸಿಗುವ ಸ್ಥಳದಲ್ಲೇ ನೋಂದಣಿ ಮಾಡಿದ್ದಾರೆ. ಗ್ರಾಮಸ್ಥರು-ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಿಬ್ಬಂದಿ ಕೂಡ ಬೆಟ್ಟ ಹತ್ತಿ ನೋಂದಣಿ ಮಾಡಿದ್ದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇಂತಹ ಪರಿಸ್ಥಿತಿ ಗ್ರಾಮಗಳಲ್ಲಿ ಪದೇ ಪದೇ ನಿರ್ಮಾಣವಾದರೂ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ನಲ್ಲಿ ಯಾಕಿಷ್ಟು ಅಸ್ಪಷ್ಟತೆ: ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ

ABOUT THE AUTHOR

...view details