ಚಿಕ್ಕಮಗಳೂರು:ಕಾಫಿನಾಡಿನ ಮಹಿಳಾ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿ ಅವರು ಜಿಲ್ಲೆಯ ಎನ್.ಆರ್.ಪುರ ಮುಖ್ಯ ರಸ್ತೆಯ ಸರ್ಕಲ್ನಲ್ಲಿ ಅಭಿಮಾನಿಗಳೊಂದಿಗೆ ಕೆಲಕಾಲ ಕ್ರಿಕೆಟ್ ಆಡಿದರು.
ಅಭಿಮಾನಿಗಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಖಾಸಗಿ ಕಾರ್ಯಕ್ರಮ ನಿಮಿತ್ತ ಎನ್.ಆರ್.ಪುರಕ್ಕೆ ಆಗಮಿಸಿದ್ದ ವೇದಾ, ಅಭಿಮಾನಿಗಳ ಬೌಲಿಂಗ್ ಎದುರಿಸಿದರು. ಕ್ರಿಕೆಟ್ ಪ್ರಿಯರು ತಮ್ಮ ನೆಚ್ಚಿನ ಕ್ರಿಕೆಟರ್ ಜೊತೆ ಕೆಲ ಕ್ಷಣಗಳನ್ನು ಕಳೆದು ಸಂತಸಪಟ್ಟರು.
ಕೃಷ್ಣಮೂರ್ತಿಯವರಿಗೆ ಶಾಲು ಹೊದಿಸಿ ಗೌರವ ಇದೇ ವೇಳೆ, ಎನ್.ಆರ್.ಪುರ ತಾಲೂಕಿನ ಲೆದರ್ ಬಾಲ್ ಕ್ರಿಕೆಟ್ ಕ್ಲಬ್ ನಿಂದ ವೇದಾ ಕೃಷ್ಣಮೂರ್ತಿಯವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ವೇದಾ, ಕ್ರಿಕೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ನಮ್ಮನ್ನ ನಾವು ಮೊದಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರಿಕೆಟ್‌ನಲ್ಲಿ ಸಾಧನೆ ಮಾಡುವ ಕನಸು ಕಂಡ ನನಗೆ ಅವಕಾಶ ಸಿಕ್ಕಿದೆ. ಮಹಿಳೆಯರೂ ಕೂಡ ಎಲ್ಲ ಕ್ಷೇತ್ರಗಳಲ್ಲೂ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು. ಅವಕಾಶಕ್ಕಾಗಿ ಕಾಯದೇ, ಅವಕಾಶವನ್ನು ನಾವು ಹುಡುಕುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕ್ರಿಕೆಟ್ ಆಡಿದ ವೇದಾ ಕೃಷ್ಣಮೂರ್ತಿ ಇದನ್ನೂ ಓದಿ:ವಿದ್ಯಾರ್ಥಿಗಳ ಹೆಸರಲ್ಲಿ 1ಸಾವಿರ ಠೇವಣಿ.. ಶಿಕ್ಷಕಿಯ ಕಾರ್ಯಕ್ಕೆ ಭೇಷ್ ಎಂದ ಸಚಿವ ಸುರೇಶ್ ಕುಮಾರ್