ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಹುಲಿ ದಾಳಿ( Tiger attacked calf) ಮುಂದುವರಿದಿದೆ. ಒಂದು ಕರುವನ್ನು ಬಲಿ ಪಡೆದು ಜನರನ್ನು ಆತಂಕಕ್ಕೆ ದೂಡಿದೆ.
ಹುಲಿ ದಾಳಿ ನಡೆಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲುನಲ್ಲಿ(Heggudlu) ಕರುವೊಂದನ್ನು ಕೊಂದಿದೆ. ರತ್ನಮ್ಮ ಎಂಬ ಹುಗ್ಗುಡ್ಲು ಗ್ರಾಮದ ಮಹಿಳೆಗೆ ಸೇರಿದ್ದ ಕರುವಿನ(Calf) ಮೇಲೆ ಜಮೀನಿನಲ್ಲಿ ಹುಲಿ ದಾಳಿ ಮಾಡಿದೆ.
ಕಳೆದ ಎರಡು ಮೂರು ವರ್ಷಗಳಿಂದ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ, ಭಾರತಿ ಬೈಲ್, ಹೊಕ್ಕಳ್ಳಿ, ಸುತ್ತಮುತ್ತ ಗ್ರಾಮಗಳಲ್ಲಿ ಹಸುಗಳ ಮೇಲೆ ದಾಳಿ ಮಾಡುವ ಘಟನೆಗಳು ಮರುಕಳಿಸುತ್ತಿವೆ.
ಹೀಗಾಗಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಅರಣ್ಯ ವಲಯ ಅಧಿಕಾರಿ ಉಮೇಶ್ ಮತ್ತು ಅರಣ್ಯ ರಕ್ಷಕ ಮೊಹಸಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ:ಗೋರಿಪಾಳ್ಯ ಅಕ್ರಮ ಕಸಾಯಿಖಾನೆಗಳ ವಿರುದ್ಧ ಎಫ್ಐಆರ್ ದಾಖಲು