ಕರ್ನಾಟಕ

karnataka

By

Published : Oct 28, 2020, 11:32 AM IST

ETV Bharat / state

ತೋಟದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವು: ಬೆಚ್ಚಿಬಿದ್ದ ಕಾರ್ಮಿಕರು

ಚಿಕ್ಕಮಗಳೂರು ಜಿಲ್ಲೆಯ ಲಕ್ಯಾ ಕ್ರಾಸ್ ಬಳಿ ಇರುವ ತೋಟವೊಂದರಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ಹಿಡಿದು ಸುರಕ್ಷಿತವಾಗಿ ಮುತ್ತೋಡಿ ಅರಣ್ಯಕ್ಕೆ ಬಿಡಲಾಗಿದೆ.

ten feet python trapped in chikmagalore district
ಹೆಬ್ಬಾವು

ಚಿಕ್ಕಮಗಳೂರು:ಜಿಲ್ಲೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ಇರುವ ನಟರಾಜ್ ಎಂಬುವವರ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.

ಹೆಬ್ಬಾವು

ನಟರಾಜ್ ಅವರ ಮನೆಯ ಸಮೀಪ ಇದ್ದ ಹತ್ತು ಅಡಿ ಉದ್ದದ ಹೆಬ್ಬಾವನ್ನು ತೋಟದ ಕಾರ್ಮಿಕರು ನೋಡಿ ಬೆಚ್ಚಿ ಬಿದ್ದಿದ್ದು, ಕೂಡಲೇ ಈ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಾವನ್ನು ಒಪ್ಪಿಸಿದ್ದಾರೆ.

ಹೆಬ್ಬಾವನ್ನು ಹಿಡಿದ ಕಾರ್ಮಿಕರು ಹಾವಿನ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದು, ಸೆರೆ ಹಿಡಿದ ಹೆಬ್ಬಾವನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಮುತ್ತೋಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ABOUT THE AUTHOR

...view details