ಕರ್ನಾಟಕ

karnataka

ETV Bharat / state

ಸ್ವಾತಿ ಅತ್ಯಾಚಾರ - ಕೊಲೆ ಪ್ರಕರಣದ ತೀರ್ಪು ಇಂದು ಪ್ರಕಟವಾಗುವ ಸಾಧ್ಯತೆ! - chickmagaluru latest news

ಮೆಣಸೆ ಗ್ರಾಮದಲ್ಲಿ 2016ರಲ್ಲಿ ನಡೆದಿದ್ದ ಸ್ವಾತಿ ಅತ್ಯಾಚಾರ - ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಕಟ ಮಾಡಲಿದೆ.

Swati rape-murder case verdict to be published today
ಸ್ವಾತಿ ಅತ್ಯಾಚಾರ-ಕೊಲೆ ಪ್ರಕರಣದ ತೀರ್ಪು ಇಂದು ಪ್ರಕಟವಾಗುವ ಸಾಧ್ಯತೆ!

By

Published : Jan 9, 2020, 1:04 PM IST

ಚಿಕ್ಕಮಗಳೂರು:ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದ್ದ ಸ್ವಾತಿ ಅತ್ಯಾಚಾರ - ಕೊಲೆ ಪ್ರಕರಣದ ತೀರ್ಪು ಇಂದು ಹೊರ ಬರುವ ಸಾಧ್ಯತೆ ಇದೆ.

ಶೃಂಗೇರಿಯ ಮೆಣಸೆ ಗ್ರಾಮದಲ್ಲಿ 2016ರಲ್ಲಿ ನಡೆದಿದ್ದ ಪ್ರಕರಣ ಇದಾಗಿದ್ದು, ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಕಟ ಮಾಡಲಿದೆ. ಈ ಪ್ರಕರಣ ಇಡೀ ಮಲೆನಾಡನ್ನೇ ಬೆಚ್ಚಿ ಬೀಳಿಸಿತ್ತು. ತೀರ್ಪು ಕಾಯ್ದಿರಿಸಿ ಜನವರಿ 9 (ಇಂದು)ಕ್ಕೆ ಕೋರ್ಟ್ ಮುಂದೂಡಿತ್ತು.

ಸ್ವಾತಿ ಅತ್ಯಾಚಾರ-ಕೊಲೆ ಪ್ರಕರಣದ ತೀರ್ಪು ಇಂದು ಪ್ರಕಟವಾಗುವ ಸಾಧ್ಯತೆ!

ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಸ್ವಾತಿ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿ ಪಾಳು ಬಾವಿಗೆ ಮೃತ ದೇಹವನ್ನು ಆರೋಪಿಗಳು ಎಸೆದಿದ್ದರು. ಈ ಸಂಬಂಧ ಪ್ರದೀಪ್, ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಕುಟುಂಬಸ್ಥರು ಅಂದಿನಿದಲೂ ಆಗ್ರಹಿಸುತ್ತಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪ‌ ಸಾಬೀತಾಗಿದ್ದು, ತೀರ್ಪಷ್ಟೇ ಬಾಕಿ ಉಳಿದಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ತೀರ್ಪು ಬರುವ ಸಾಧ್ಯತೆ ಇದೆ.

ABOUT THE AUTHOR

...view details