ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಕಾರಿನ ಇಂಜಿನ್ ನಲ್ಲಿ ಸೇರಿಕೊಂಡಿದ್ದ ನಾಲ್ಕು ಅಡಿ ಉದ್ದದ ನಾಗರಹಾವನ್ನ ಸೆರೆ ಹಿಡಿದಿದು ಸಂರಕ್ಷಿಸಲಾಗಿದೆ.
ಕಾರು ತೆಗೆಯುವ ಮುನ್ನ ಹುಷಾರು... ಇಂಜಿನ್ನಲ್ಲಿ ಸೇರಿಕೊಂಡಿದ್ದ ನಾಗಪ್ಪ, ಆಮೇಲೇನಾಯ್ತು?
ಇಂಡಿಕಾ ಕಾರಿನ ಇಂಜಿನ್ ಒಳಗೆ ಕಾಣಿಸಿಕೊಂಡಿದ್ದ ನಾಲ್ಕು ಅಡಿ ಉದ್ದದ ನಾಗರಹಾವನ್ನ ಸ್ನೇಕ್ ಆರೀಫ್ ಸೆರೆ ಹಿಡಿದು ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ನಾಗರಹಾವನ್ನ ಸೆರೆ ಹಿಡಿದ ಸ್ನೇಕ್ ಆರೀಫ್
ಜಿಲ್ಲೆಯ ಕೊಟ್ಟಿಗೆಹಾರದ ಜೀಶನ್ ಎಂಬುವರ ಇಂಡಿಕಾ ಕಾರಿನ ಇಂಜಿನ್ ಒಳಗೆ ನಾಗರ ಹಾವು ಕಾಣಿಸಿಕೊಂಡಿದೆ. ಗಾಬರಿಯಾದ ಜೀಶನ್ ಸ್ನೇಕ್ ಆರೀಫ್ ಗೆ ವಿಷಯ ತಿಳಿಸಿದ್ದಾರೆ.
ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಆರೀಫ್ ಸುಮಾರು ಒಂದು ಗಂಟೆಗೂ ಅಧಿಕ ಕಾರ್ಯಚರಣೆ ನಡೆಸಿ ಇಂಜಿನಲ್ಲಿದ್ದ ನಾಗರಹಾವನ್ನು ಸೆರೆ ಹಿಡಿದ್ದಾರೆ. ನಂತರ ಸುರಕ್ಷಿತವಾಗಿ ಸೆರೆ ಹಿಡಿದ ನಾಗರಹಾವನ್ನು ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.