ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸತತ ಒಂದು ವಾರಗಳ ಕಾಲ ಸುರಿದ ಧಾರಕಾರ ಮಳೆ ಸಾವಿರಾರೂ ಜನರ ಬದುಕನ್ನೇ ಸರ್ವ ನಾಶ ಮಾಡಿದೆ.
ಕಾಫಿನಾಡಿನಲ್ಲಿ ನಿಲ್ಲದ ಮಳೆಯ ಅವಾಂತರ.. - ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸತತ ಒಂದು ವಾರಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ಹಲವಾರು ಭಾಗದಲ್ಲಿ ಗುಡ್ಡ ಕುಸಿತ, ಮನೆ ಕುಸಿತ ಉಂಟಾಗಿ ನೂರಾರು ಜನರು ಬೀದಿಗೆ ಬಿದ್ದಿದ್ದಾರೆ.
ಕಾಫಿನಾಡಿನಲ್ಲಿ ನಿಲ್ಲದ ಮಳೆಯ ಅವಾಂತರ
ಹಲವಾರು ಭಾಗದಲ್ಲಿ ಗುಡ್ಡ ಕುಸಿತ, ಮನೆ ಕುಸಿತ ಉಂಟಾಗಿ ನೂರಾರು ಜನರು ಬೀದಿಗೆ ಬಿದ್ದಿದ್ದಾರೆ. ಕಿ.ಮೀಗಟ್ಟಲೇ ಗುಡ್ಡ ಕುಸಿದಿದ್ದು ಮಲೆನಾಡು ಜನರ ಬದುಕೇ ಮಣ್ಣಿನಲ್ಲಿ ಹುದುಗಿ ಹೋಗಿದೆ. ಸಾವಿರಾರು ಎಕರೆ ಅಡಿಕೆ ತೋಟ, ಕಾಫೀ , ಮೆಣಸಿನ ಗಿಡಗಳು ಬೇರು ಸಮೇತ ಕಿತ್ತುಕೊಂಡು ಹೋಗಿವೆ. ಹತ್ತಾರೂ ಮನೆಗಳ ಕುರುಹುಗಳು ಸಿಗದಂತೆ ಭೂಮಿಯಲ್ಲಿ ಮುಚ್ಚಿ ಹೋಗಿದ್ದು, ಎಲ್ಲಿ ನೋಡಿದರೂ ಕೆಸರು ತುಂಬಿಕೊಂಡಿದೆ.ಬರಿಗಾಲಿನಲ್ಲಿ ಸಂಚಾರ ಮಾಡೋದಕ್ಕೆ ಕಷ್ಟಕರವಾಗಿದ್ದು, ಭೂ ಕುಸಿತ ಉಂಟಾಗಿರುವ ಜಾಗದಲ್ಲಿ ಏನು ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.