ಚಿಕ್ಕಮಗಳೂರು:ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾರಣವೇನು?
39 ತಾಲೂಕು, 6 ಜಿಲ್ಲೆಯಲ್ಲಿ ನನ್ನ ಪ್ರೋಟೋಕಾಲ್ ವ್ಯಾಪ್ತಿ ಇದೆ. ಆದ್ರೆ ಇಲ್ಲಿ ನಡೆಯುವ ಸಭೆಗಳಿಗೆ ನನ್ನನ್ನು ಕರೆಯದೇ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಹಾಗಾದರೆ ಸಭೆ ಬಿಜೆಪಿ ಜನಪ್ರತಿನಿಧಿಗಳಷ್ಟೇ ಸೀಮಿತವೇ? ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಡಿಸಿ ಕಚೇರಿ ಎದುರು ಕುಳಿತು ಎಸ್.ಎಲ್.ಭೋಜೇಗೌಡ ಪ್ರತಿಭಟನರ ಜಿಲ್ಲಾ ಮಂತ್ರಿ ಎಂಟು ಬಾರಿ ಶಾಸಕರಾಗಿದ್ದಾರೆ. ಅವರ ಮೇಲೆ ನನಗೆ ಗೌರವವಿದೆ. ಆದ್ರೆ ನಿಮ್ಮ ಸಾಧನೆ ಏನು? ಬಂದ ಪುಟ್ಟ ಹೋದ ಪುಟ್ಟನ ಕಥೆ ಅಷ್ಟೇ ಎಂದು ಕಿಡಿಕಾರಿದರು. ಭೋಜೇಗೌಡರಿಗೆ ಬೆಲೆ ಕೊಡಬೇಡಿ, ಆದ್ರೆ ಹುದ್ದೆಗೆ ಬೆಲೆ ಕೊಡಿ. ಸಾಯುವವರೆಗೂ ಅಧಿಕಾರದಲ್ಲಿ ಇರುತ್ತೀರಾ? ನಾನೂ ನೋಡ್ತೀನಿ. ನಾನು ಇಲ್ಲಿಂದ ಎದ್ದು ಹೋಗಲ್ಲ, ನನ್ನನ್ನು ಅರೆಸ್ಟ್ ಮಾಡಿ. ನಿಮ್ಮ ಹುಳುಕನ್ನು ಬಿಚ್ಚಿಡ್ತೀನಿ ಎಂದು ಸಭೆಗೆ ಕರೆಯುವುದಿಲ್ಲವಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ:ಲಿಂಗಸುಗೂರು ಬಸ್ ನಿಲ್ದಾಣ ಬಳಿ ವ್ಹೀಲಿಂಗ್ ಮಾಡಿದ ಟಿಪ್ಪರ್! Video
ರಾಜಕೀಯವನ್ನು ನಿಮ್ಮ ಪಕ್ಷದ ಕಚೇರಿಯಲ್ಲಿ ಮಾಡಿ. ಅಧಿಕಾರಿಗಳು ನೆಟ್ಟಗಿದ್ದಾರೆ. ಶಾಸಕರು, ಜಿಲ್ಲಾಮಂತ್ರಿಗಳು ಸರಿ ಇಲ್ಲ. ಹಲವು ತಿಂಗಳಿಂದ ನೊಂದು ಇಂದು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮುಂದುವರೆಸಿದರು.